ಪುತ್ತೂರು: ವಳತ್ತಡ್ಕ ಬದ್ರಿಯಾ ಜುಮಾ ಮಸೀದಿಯ ವಾರ್ಷಿಕ ಮಹಾ ಸಭೆಯು ಗೌರವಾಧ್ಯಕ್ಷರಾದ ಸುಲೈಮಾನ್ ಬಳ್ಳೇರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂತನ ಕಮಿಟಿ ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಅಹ್ಮದ್ ಹಾಜಿ ಕೆ.ಪಿ, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಡೆಂಜಿಬಾಗಿಲು, ಪ್ರಧಾನ ಕಾರ್ಯದರ್ಶಿಯಾಗಿ ರಝಾಕ್ ಬಳ್ಳೇರಿ, ಜೊತೆ ಕಾರ್ಯದರ್ಶಿಯಾಗಿ ಮುನೀರ್ ಪಂಜ, ಕೋಶಾಧಿಕಾರಿಯಾಗಿ ಮಜೀದ್ ಯು.ಕೆ ಆಯ್ಕೆಯಾದರು.
ನೂತನ ಕಮಿಟಿಯ ಸದಸ್ಯರಾಗಿ ರಿಯಾಝ್ ಕೊಪ್ಪಳ, ಅಶ್ರಫ್ ಕೊಪ್ಪಳ , ಬಾತಿಷ ಕೊಪ್ಪಳ , ಜಾಫರ್ ಕೆ.ಪಿ, ಹನೀಫ್.ಕೆ, ಹಬೀಬ್ , ಶರೀಫ್ ಪಂಜ, ಸುಲೈಮಾನ್ .ಕೆ, ಅಶ್ರಫ್ ರಾಝ್, ಇಸಾಕ್ ದರ್ಕಾಸ್ ಮತ್ತು ಇಸಾಕ್ .ಬಿ ಇವರನ್ನು ಆಯ್ಕೆಮಾಡಲಾಯಿತು.
ಯಂಗ್ ಮೆನ್ಸ್ ಪ್ರತಿನಿಧಿಯಾಗಿ ರಫೀಕ್ ಬಳ್ಳೇರಿ ಆಯ್ಕೆಯಾದರು.
ಕಾರ್ಯಕ್ರಮವನ್ನು ಸ್ಥಳೀಯ ಖತೀಬರಾದ ಸ್ವಾಲಿಹ್ ಕೌಸರಿ ಉಸ್ತಾದರು ದುಆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಕಮಿಟಿ ಅಧ್ಯಕ್ಷರಾದ ರಿಯಾಝ್ ಕೊಪ್ಪಳ ಸ್ವಾಗತಿಸಿದರು ಮತ್ತು ಪ್ರ.ಕಾರ್ಯದರ್ಶಿ ಹನೀಫ್ .ಕೆ ಲೆಕ್ಕಪತ್ರ ಮಂಡಿಸಿದರು.