ಸ್ನೇಹಿತರೆ, ಶಬರಿಮಲೆಯಂತಹ ದೇವಾಲಯಗಳಿಗೆ ಋತುಮತಿಯಾಗಿರುವ 10 ರಿಂದ 50 ವರ್ಷದ ಸ್ತ್ರೀಯರಿಗೆ ದರ್ಶನ ಪಡೆಯಲು ಅನುಮತಿ ಮಾಡಿಕೊಡಬೇಕು ಎಂದು ಹಲವಾರು ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಲೇ ಇದೆ. ಅಲ್ಲದೆ ದೇಶದ ಪ್ರತ್ಯೇಕ ದೊಡ್ಡ ದೊಡ್ಡ ದೇವಾಲಯಗಳಿಗೆ ಮುಟ್ಟಾದ ಹೆಣ್ಣು ಮಕ್ಕಳ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೆ ಭಾರತದಲ್ಲಿರುವ ಈ ಏಕೈಕ ದೇವಾಲಯದಲ್ಲಿ ಹೆಣ್ಣುಮಕ್ಕಳು ಋತುಮತಿಯಾದಾಗ ಹಬ್ಬದಂತೆ ಆಚರಿಸಲಾಗುತ್ತದೆ.

ಅಷ್ಟೇ ಅಲ್ಲದೆ ಹೆಣ್ಣಿನ ಗುಪ್ತಾಂಗಗಳನ್ನು ಪೂಜಿಸುವಂತಹ ಏಕೈಕ ದೇವಾಲಯ ಇದಾಗಿದೆ. ಜೊತೆಗೆ ಅಲ್ಲಿನ ದೇವಿ ಮುಟ್ಟಾದರೆ ಸಂಪೂರ್ಣ ನದಿಯೇ ಕೆಂಪಾಗುವ ಪ್ರತ್ಯಕ್ಷ ಸಾಕ್ಷಿಗಳು ದೊರಕಿವೆ. ಹಾಗಾದ್ರೆ ಇಷ್ಟೊಂದು ರೋಚಕತೆಯುಲ್ಲಾ ದೇವಾಲಯವಾದರೂ ಯಾವುದು ಎಲ್ಲಿದೆ ಎಂಬ ಎಲ್ಲ ಮಾಹಿತಿ ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ರಜಸ್ವತಿ ಅಥವಾ ಮುಟ್ಟಾಗುವುದು ಹೆಣ್ಣಿನ ಬಾಳಿನ ಮುಖ್ಯ ಘಟ್ಟ, ಋತುಚಕ್ರ ಎಂಬುದು ಆ ಭಗವಂತ ಹೆಣ್ಣಿಗೆ ಕೊಟ್ಟಂತಹ ಅದ್ಭುತಶಕ್ತಿ.

ಅಷ್ಟೇ ಅಲ್ಲದೆ ಇದು ಮಾನವ ಸಂಕುಲದ ಮುಂದಿನ ಪೀಳಿಗೆಗೆ ದಾರಿದೀಪವಿದ್ದಂತೆ. ಹೀಗಿರುವಾಗ ಅದೆಷ್ಟೋ ಜನ ಹೆಣ್ಣುಮಕ್ಕಳು ಋತುಚಕ್ರದ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಆಸ್ಪತ್ರೆಗಳಿಗೆ ಅಲೆದಾಡಿ ನಿಮ್ಮ ಸಮಸ್ಯೆಗೆ ಸರಿಯಾದ ಪರಿಹಾರ ಕಂಡುಕೊಳ್ಳದಿದ್ದರೆ ಈ ದೇವಸ್ಥಾನಕ್ಕೆ ಭೇಟಿ ನೀಡಿ.. ಇಲ್ಲಿ ಹೆಣ್ಣುಮಕ್ಕಳ ಪ್ರತಿಯೊಂದು ಗುಪ್ತಾ ಹಾಗೂ ನಿಗೂಢ ಸಮಸ್ಯೆಗಳಿಗೂ ಪರಿಹಾರ ದೊರಕುತ್ತದೆ. ಹೌದು ಫ್ರೆಂಡ್ಸ್ ಎಲ್ಲ ದೇವಾಲಯಗಳ ತರಹ ಈ ದೇವಾಲಯದಲ್ಲಿ ದೇವಿಯ ವಿಗ್ರಹ ಇಟ್ಟು ಪೂಜೆ ಮಾಡುವುದಿಲ್ಲ. ಬದಲಿಗೆ ಹೆಣ್ಣಿನ ಗುಪ್ತಾಂಗ ಅಂದರೆ ಯೋನಿಯನ್ನು ಪೂಜಿಸಲಾಗುತ್ತದೆ ಎಂದು ತಿಳಿಸುತ್ತಾರೆ.

ಇದನ್ನು ದೇವಿಯ ಯೋನಿ ಪೀಠ ಎಂದು ಕರೆಯಲಾಗುತ್ತದೆ. ಹೌದು ಕಾಮಾಕ್ಯ ಎಂಬ ದೇವಾಲಯವಿದು ಇಲ್ಲಿ ದೇವಿ ಋತುಮತಿಯಾಗುತ್ತಾಳೆ ಅಥವಾ ಮುಟ್ಟಾಗುತ್ತಾಳೆ ಎಂಬುದಕ್ಕೆ ಪ್ರತಿ ವರ್ಷ ಆಷಾಢ ಮಾಸದಲ್ಲಿ ಅಲ್ಲಿ ಇರುವಂತಹ ನದಿಯು ಕೆಂಪು ಬಣ್ಣವಾಗುವುದು ಸಾಕ್ಷಿ. ಹೌದು ಜೂನ್ ತಿಂಗಳಿನಲ್ಲಿ ಅಲ್ಲಿ ಇರುವಂತಹ ಬ್ರಹ್ಮಪುತ್ರ ನದಿಯು ಕೆಂಪು ಬಣ್ಣದಲ್ಲಿ ಹರಿಯುತ್ತದೆ. ಇದನ್ನು ಗಮನಿಸುವಂತಹ ಅಲ್ಲಿನ ಜನರು ದೇವಿಗೆ ಋತುಸ್ರಾವವಾಗುತ್ತಿದೆ ಎಂದು ನಂಬುತ್ತಾರೆ. ಈ ದೇವಸ್ಥಾನದ ಇನ್ನಷ್ಟು ರೋಚಕ ಸಂಗತಿ ತಿಳಿದುಕೊಳ್ಳಬೇಕಾದರೆ ಈ ಕೆಳಗಿನ ವಿಡಿಯೋವನ್ನು ತಪ್ಪದೆ ವೀಕ್ಷಿಸಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆಕಾಮೆಂಟ್ ಮೂಲಕ ತಿಳಿಸಿ.
