dtvkannada

ಡಿಜಿಟಲ್‌ ಯುಗ ಬೆಳೆದಂತೆಲ್ಲ ಹಣದ ವ್ಯವಹಾರವು ಸಹ ಡಿಜಿಟಲ್ ಆಗಿದೆ. ಡಿಡಿ, ಚೆಕ್‌ ವ್ಯವಸ್ಥೆ ಹೋಗಿ ಮೊಬೈಲ್‌ ಬ್ಯಾಂಕಿಂಗ್‌, ಯುಪಿಐ ಪೇಮೆಂಟ್, ಇಂಟರ್‌ನೆಟ್‌ ಬ್ಯಾಂಕಿಂಗ್‌ , ಎಸ್‌ಎಂಎಸ್‌ ಬ್ಯಾಂಕಿಂಗ್‌ ವ್ಯವಸ್ಥೆ ಈಗಾಗಲೇ ಚಾಲ್ತಿಯಲ್ಲಿದೆ. ಭಾರತ ಈಗ ಡಿಜಿಟಲ್ ಮತ್ತು ಕ್ಯಾಶ್‌ಲೆಸ್‌ ಆಗುತ್ತಿದೆ. ಈ ಸಮಯದಲ್ಲಿ ನಾವು ಎಚ್ಚರದಿಂದಿರಬೇಕಾಗಿರುವುದು ಅವಶ್ಯ. ಏಕೆಂದರೆ ಈಗೀಗ ಸೈಬರ್‌ ಕ್ರೈಂ ಪ್ರಕರಣಗಳು ಕೂಡ ಹೆಚ್ಚುತ್ತಿವೆ.



ಇಮೇಲ್‌, ಎಸ್‌ಎಂಎಸ್‌ನಲ್ಲಿ ಬಂದ ಮೇಲ್‌ ಮತ್ತು ಮೇಸೆಜ್‌ಗಳಿಂದ ಹಣ ಕಳೆದುಕೊಂಡ ವರದಿಗಳು ದಿನಕ್ಕೊಂದರಂತೆ ಕೇಳುತ್ತಿದ್ದೇವೆ. ಅದರಂತೆ ಹ್ಯಾಕಿಂಗ್‌ ಪ್ರಭಲವಾಗುತ್ತಿದ್ದು, ಹ್ಯಾಕಿಂಗ್‌ ಜಗತ್ತಿನಲ್ಲಿ ನಿಮ್ಮ ಹಣ ಸೇಫ್‌ ಆಗಿರಬೇಕೆಂದರೆ ನೀವು ಕೂಡ ವ್ಯವಹಾರ ಮಾಡುವಾಗ ಎಚ್ಚರದಿಂದಿರಬೇಕು. ಹೀಗಾಗಿ ಆನ್‌ಲೈನ್ ಪೇಮೆಂಟ್ ಮಾಡುವಾಗ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ.
ಹಾಗಾದ್ರೆ ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿ ಪಾವತಿಸಲು ಇರುವಂತಹ ಮುನ್ನೆಚ್ಚರಿಕೆ ಕ್ರಮ ಏನು?

ನೀವು ಹಣಕಾಸು ವ್ಯವಹಾರವನ್ನು ಇಂಟರ್‌ನೆಟ್‌ನಲ್ಲಿ ಮಾಡುತ್ತೀರಿ ಎಂದರೆ ಪಬ್ಲಿಕ್‌ ವೈ ಫೈ ಅಥವಾ ಅಸುರಕ್ಷಿತ ವೈ ಫೈ ಅಥವಾ ಇಂಟರ್‌ನೆಟ್‌ ಬಳಸಲೆಬೇಡಿ. ಸ್ಮಾರ್ಟ್‌ಫೋನ್‌ನಲ್ಲಿ ಪಬ್ಲಿಕ್ ವೈ ಫೈ ಸಂಪರ್ಕ ಪಡೆದುಕೊಂಡು ನಿಮ್ಮ ಕ್ರೆಡಿಟ್‌ ಕಾರ್ಡ್‌ ಮತ್ತು ಡೆಬಿಟ್‌ ಕಾರ್ಡ್‌ ಮಾಹಿತಿಯನ್ನು ನಮೂದಿಸಿದ್ದೀರಿ ಎಂದರೆ ಹ್ಯಾಕರ್‌ಗಳ ಕೈಯಲ್ಲಿ ಸಿಲುಕಿದಂತೆ. ಅದಕ್ಕೆ ಪಬ್ಲಿಕ್‌ ವೈ ಫೈನಲ್ಲಿ ಹಣಕಾಸು ವ್ಯವಹಾರ ಬೇಡ.

ಇ-ಮೇಲ್‌ಗಳಲ್ಲಿ ಶೇ. 80ಕ್ಕೂ ಹೆಚ್ಚು ಸ್ಪ್ಯಾಮ್ ಆಗಿರುವುದರಿಂದ ನಿಮ್ಮ ಇ-ಮೇಲ್ ಮೂಲಕ ನೆಟ್ ಬ್ಯಾಂಕಿಂಗ್ ಸೈನ್‌ಇನ್ ಆಗುವುದನ್ನು ತಡೆಗಟ್ಟಿ. ನೀವಿರದ ಸಮಯದಲ್ಲಿ ನಿಮ್ಮ ಮನೆಯ ಸುರಕ್ಷತೆಗಾಗಿ ಬೀಗ ಜಡಿಯುವಂತೆ ಇ-ಬ್ಯಾಂಕಿಂಗ್ ವ್ಯವಹಾರ ಮುಗಿದ ಕೂಡಲೇ ಮರೆಯದೇ ಲಾಗ್‌ಔಟ್ ಮಾಡಿ. ಜೊತೆಗೆ ಮೊಬೈಲ್ ಬ್ಯಾಂಕಿಂಗ್‌ನಲ್ಲಿ ನೀವು ಖಾತೆ ಹೊಂದಿರುವ ಬ್ಯಾಂಕ್‌ನ ಅಧಿಕೃತ ಆ್ಯಪ್ ಬಳಸಿದರೆ ಹೆಚ್ಚು ಸುರಕ್ಷಿತ.

ವಂಚಕರು ಯುಪಿಐನಲ್ಲಿರುವ ರಿಕ್ವೆಸ್ಟ್‌ ಫೀಚರ್‌ ಅನ್ನು ದುರ್ಬಳಕೆ ಮಾಡುವುದು ಜಾಸ್ತಿ. ನಿಮ್ಮ ಯುಪಿಐ ಪಿನ್‌ ಕೋಡ್‌ ನಮೂದಿಸಿ, ಹಣ ಪಡೆಯಿರಿ ಎಂಬಂಥ ನಕಲಿ ರಿಕ್ವೆಸ್ಟ್‌ಗಳನ್ನು ಕಳಿಸಿ ಯಾಮಾರಿಸುತ್ತಾರೆ. ಯುಪಿಐ ಪಿನ್‌ ತಿಳಿದು ವಂಚಿಸುವುದೇ ಅವರ ಗುರಿ. ಯುಪಿಐ ವರ್ಗಾವಣೆಗಳಲ್ಲಿ ಹಣವನ್ನು ಕಳಿಸಲು ಮಾತ್ರ ಪಿನ್‌ ಅಗತ್ಯ. ಪಡೆಯಲು ಅಗತ್ಯ ಇಲ್ಲ.

ಮೊಬೈಲ್‌ ಬ್ಯಾಂಕಿಂಗ್‌ ವ್ಯವಹಾರವನ್ನು ಬ್ಯಾಂಕ್‌ನ ಅಧಿಕೃತ ಅಥವಾ ಪ್ಲೇ ಸ್ಟೋರ್‌ನ ಸೆಕ್ಯೂರ್‌ ಆ್ಯಪ್‌ಗಳಲ್ಲಿಯೇ ಮಾಡಿ. ಯಾಕೆಂದರೆ ಇಲ್ಲಿ ನಿಮ್ಮ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇರುತ್ತದೆ. ಮಾಹಿತಿ ಸೋರಿಕೆಯಾದರೂ ಬ್ಯಾಂಕ್‌ಗಳ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಬಹುದು.

ಆನ್‌ಲೈನ್‌ ಪಾವತಿ ಮಾಡುವ ಮುನ್ನ ಆ ವೆಬ್‌ಸೈಟ್‌ ಲಿಂಕ್‌ URL https:// ಚೆಕ್ ಮಾಡಿ. ಇದರಲ್ಲಿ ‘s’ ಇದ್ದರೆ ಆ ವೆಬ್‌ಸೈಟ್‌ ಸುರಕ್ಷಿತ ಎಂದು ನೀವು ಭಾವಿಸಬಹುದು. ಗೂಗಲ್‌ನಿಂದ ಗುರುತಿಸಲ್ಪಟ್ಟಿರುವಂತಹ ಒಂದು ಸುರಕ್ಷಿತ ವೆಬ್‌ಸೈಟ್ ಇದಾಗಿದೆ ಎಂದು ನೀವು ಭಾವಿಸಬಹುದು. ಆದರೂ, ಇವುಗಳ ಮೂಲಕ ಯುಪಿಐ ಮೂಲಕ ವ್ಯವಹರಿಸಿದರೆ ಉತ್ತಮ ಎನ್ನಬಹುದು.

ಅತಿ ಸರಳ ಭದ್ರತಾ ವಿಧಾನವೆಂದರೆ ನಿಯಮಿತವಾಗಿ ಪಾಸ್‌ವರ್ಡ್‌ ಬದಲಾಯಿಸುವುದು. ಇಂಟರ್‌ನೆಟ್‌ ಬ್ಯಾಂಕಿಂಗ್‌ ಅಥವಾ ಯುಪಿಐ ಪಾಸ್‌ವರ್ಡ್‌, ಪಿನ್‌ ನಂಬರ್‌ನ್ನು ಸ್ಟ್ರಾಂಗ್‌ ಆಗಿ ತಯಾರಿಸಿ. ನಿಮ್ಮ ಹೆಸರು ಅಥವಾ ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಪಾಸ್‌ವರ್ಡ್‌ ಆಗಿ ನಮೂದಿಸಬೇಡಿ. ಪಾಸ್‌ವರ್ಡ್‌ನಲ್ಲಿ ಸಂಖ್ಯೆ, ಅಕ್ಷರ ಮತ್ತು ಚಿಹ್ನೆಗಳನ್ನು ಬಳಸಿ ಪಾಸ್‌ವರ್ಡ್‌ ರಚಿಸಿ.

ನೀವು ಬಳಸುವ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಆಂಟಿ ವೈರಸ್ ಮತ್ತು ಫೈರ್‌ವಾಲ್ ಅಪ್ಡೇಟ್‌ ಆಗಿರುವಂತೆ ನೋಡಿಕೊಳ್ಳಬೇಕು. ಇತ್ತಿಚಿನ ದಿನಗಳಲ್ಲಿ ಇದು ಹೆಚ್ಚು ಅಗತ್ಯವಾದ ವಿಷಯವೇನಲ್ಲ. ಆದರೂ, ನಿಮ್ಮ ಸುರಕ್ಷತೆಯನ್ನು ಎರಡು ಪಟ್ಟು ಹೆಚ್ಚಿಸಿಕೊಳ್ಳಲು ಈ ಮನವಿಯನ್ನು ಪರಿಗಣಿಸಿ.

By dtv

Leave a Reply

Your email address will not be published. Required fields are marked *

error: Content is protected !!