ನವದಂಪತಿಗಳ ಪಾಲಿಗೆ ಮೊದಲ ರಾತ್ರಿಯೆಂಬುದು ಜೀವನಪೂರ್ತಿ ನೆನಪಿರುವ ಒಂದು ಮಧುರವಾದ ಕ್ಷಣ. ಆದರೆ, ಆ ಮೊದಲ ರಾತ್ರಿಯೇ ಉತ್ತರ ಪ್ರದೇಶದ ದಂಪತಿಯ ಪಾಲಿಗೆ ಕರಾಳ ರಾತ್ರಿಯಾಗಿತ್ತು. ಹೆಂಡತಿಯೊಂದಿಗೆ ಹೊಸ ಜೀವನವನ್ನು ಆರಂಭಿಸಲು ಸಜ್ಜಾಗಿದ್ದ ಗಂಡನಿಗೆ ತನ್ನ ಮೊದಲ ರಾತ್ರಿಯಂದೇ ಆಕೆ 5 ತಿಂಗಳ ಗರ್ಭಿಣಿ ಎಂಬ ವಿಷಯ ತಿಳಿದರೆ ಏನಾಗಬಹುದು?! ಈ ವಿಷಯ ಗೊತ್ತಾಗುತ್ತಿದ್ದಂತೆ ರಸಮಯವಾಗಿರಬೇಕಾಗಿದ್ದ ಆ ಸಮಯ ಕಹಿಸಮಯವಾಗಿ ಇಡೀ ಕುಟುಂಬದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
ಮದುವೆಯ ಮೊದಲ ರಾತ್ರಿಯಲ್ಲೇ ತನ್ನ ಹೆಂಡತಿ 5 ತಿಂಗಳ ಗರ್ಭಿಣಿ ಎಂಬ ವಿಷಯ ಗೊತ್ತಾಗಿ ಗಂಡ ಆಘಾತಕ್ಕೀಡಾದ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
ಬೇರೆ ದಾರಿ ಕಾಣದೆ ಆ ವ್ಯಕ್ತಿ ತನ್ನ ಹೆಂಡತಿಯ ಮನೆಯವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ.
ಮದುವೆಯ ರಾತ್ರಿಯೇ ವಧುವಿಗೆ ಜೋರಾಗಿ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಸ್ಕ್ಯಾನಿಂಗ್ ಮಾಡಿದ ವೈದ್ಯರು ಆಕೆ 5 ತಿಂಗಳ ಗರ್ಭಿಣಿ ಎಂಬ ವಿಷಯವನ್ನು ತಿಳಿಸಿದ್ದರು. ಆಕೆಯ ಹೊಟ್ಟೆಯಲ್ಲಿ ಅವಳಿ ಮಕ್ಕಳು ಇದ್ದರೂ ಆಕೆ ಯಾರಿಗೂ ಮೊದಲೇ ಈ ವಿಷಯವನ್ನು ಹೇಳಿರಲಿಲ್ಲ.
ಈ ವಿಷಯವನ್ನು ಆ ವಧುವಿನ ಮನೆಯವರಿಗೆ ಹೇಳಿದಾಗ ಅವರು ತಮ್ಮ ಮಗಳು ಗರ್ಭಿಣಿಯಾಗಲು ಸಾಧ್ಯವೇ ಇಲ್ಲ, ನೀವೇ ಬೇಕೆಂದೇ ಸುಳ್ಳು ಹೇಳುತ್ತಿದ್ದೀರಿ ಎಂದು ವಾದಿಸಿದರು. ಅಷ್ಟೇ ಅಲ್ಲದೆ, ಸುಳ್ಳು ಕೇಸ್ ಹಾಕಿ ಜೈಲಿಗಟ್ಟುವ ಬೆದರಿಕೆಯೊಡ್ಡಿದರು. ಬಳಿಕ ಪೊಲೀಸರ ಮಧ್ಯ ಪ್ರವೇಶದ ನಂತರ ಆ ಯುವತಿ ತನಗೆ ಬೇರೊಬ್ಬನೊಂದಿಗೆ ಸಂಬಂಧವಿದ್ದು, ಆತನೇ ತನ್ನ ಹೊಟ್ಟೆಯಲ್ಲಿರುವ ಮಗುವಿನ ತಂದೆ ಎಂದು ಹೇಳಿದ್ದಾಳೆ.