ಪುತ್ತೂರು: ಗಾಂಜಾ ಲಹರಿ ಮಧ್ಯ, ಜೂಜಾಟಗಳು ಯುವ ಶಕ್ತಿಗಳನ್ನು ಆಕ್ರಮಿಸುತ್ತಿದ್ದು ಜಮಾಅತ್ ಸಮಿತಿಗಳು ಇದರ ಬಗ್ಗೆ ಗಮನಾರ್ಹ ಹೆಜ್ಜೆ ಇಡಬೇಕಿದೆ ಎಂದು ವಲೀಯುದ್ದೀನ್ ಫೈಝಿ ವಾಝಕ್ಕಾಡ್ ಪುತ್ತೂರು ಮುಹಿಯ್ಯುದ್ದೀನ್ ಜಮಾಅತ್ ಕಮಿಟಿ ಸಂಪ್ಯ ಇದರ ಆಶ್ರಯದಲ್ಲಿ ಐದು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಉರೂಸ್ ಕಾರ್ಯಕ್ರಮದ ಅಂಗವಾಗಿ ಇಂದು ನಡೆದ ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಲೀಸ್ ಗೆ ನೇತೃತ್ವ ನೀಡಿ ಮಾತನಾಡಿದರು.
ನೂರೇ ಅಜ್ಮೀರ್ ಮಜ್ಲೀಸ್ ಬೆಳಗ್ಗಿನ ಸುಪ್ರಭಾತ ಸಮಯದಲ್ಲಿ ಲಕ್ಷಾಂತರ ಮಂದಿಗಳನ್ನು ಆನ್-ಲೈನ್ ಮೂಲಕ ಒಗ್ಗೂಡಿಸಿ ಸತ್ಯವಿಶ್ವಾಸಿಗಳಿಗೆ ಆಧ್ಯಾತ್ಮಿಕತೆಯ ಬೆಳಕನ್ನು ಪಸರಿಸುತ್ತಿದ್ದು. ದಿನನಿತ್ಯ ಹಲವಾರು ಪವಾಡಗಳಿಗೆ ಪ್ರಸ್ತುತ ಮಜ್ಲೀಸ್ ಸಾಕ್ಷಿಯಾಗುತ್ತಿದೆ.
ಸಂಪ್ಯ ಮಖಾಂ ಉರೂಸ್ ಅಂಗವಾಗಿ ನಡೆದ ಪ್ರಸ್ತುತ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿಗಳು ಭಾಗವಹಿಸಿದ್ದು.
ಅನಾರೋಗ್ಯ ಪೀಡಿತರಾದ ಹಲವಾರು ಚಿಕ್ಕ, ಪುಟ್ಟ ಮಕ್ಕಳನ್ನು ಆಧ್ಯಾತ್ಮಿಕ ಮಜ್ಲೀಸ್ ಗೆ ಕರೆದುಕೊಂಡು ಬಂದಿದ್ದು ನೂರೇ ಅಜ್ಮೀರ್ ನ ಪವಾಡಕ್ಕೆ ಹಿಡಿದ ಕೈಗನ್ನಡಿಯಾಗಿದೆ.ಪ್ರಸ್ತುತ ಮಜ್ಲೀಸ್ ಹಲವಾರು ಪವಾಡಗಳ ತೀರವಾಗಿದೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜುಮಾ ಮಸ್ಜಿದ್ ಬೋಲ್ವಾರ್ ಖತೀಬ್ ಅಬ್ದುಲ್ ಕರೀಂ ದಾರಿಮಿ ಪ್ರಸ್ತುತ ಮಜ್ಲೀಸ್ ನ ಆರಂಭ ಮತ್ತು ಅದರ ಉನ್ನತಿಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.ನೂರೇ ಅಜ್ಮಿರ್ ಅಡ್ಮಿನ್ ಇಕ್ಬಾಲ್ ಬಾಳಿಲ ಮಜ್ಲೀಸ್ ನ ಪವಾಡ ಮತ್ತು ವಿಶೇಷತೆಗಳ ಬಗ್ಗೆ ಮನವರಿಕೆ ಮಾಡಿದರು.
ಕಾರ್ಯಕ್ರಮದಲ್ಲಿ ಸೆಯ್ಯದ್ ಇಸ್ಮಾಯಿಲ್ ಕೆ.ಎಸ್ ಕೋಯಕುಟ್ಟಿ ತಂಙಳ್ ಅಲ್ ಬುಖಾರಿ ಅಧ್ಯಕ್ಷತೆ ವಹಿಸಿದರು.ಸೆಯ್ಯದ್ ಶಾಹಿನ್ ಅಲ್-ಬುಖಾರಿ ಪ್ರಾರ್ಥನೆಗೆ ನೇತೃತ್ವ ನೀಡಿದರು.
ಕಾರ್ಯಕ್ರಮದಲ್ಲಿ ಸಿರಾಜುದ್ದೀನ್ ಫೈಝಿ ಮಾಡನ್ನೂರ್, ಅಬೂಬಕ್ಕರ್ ಸಿದ್ದೀಕ್ ಫೈಝಿ ಮೊಟ್ಟೆತ್ತಡ್ಕ, ಅಶ್ರಫ್ ದಾರಿಮಿ ಸಂಟ್ಯಾರ್, ಹಸನ್ ಬಾಖವಿ ಮುಕ್ರಂಪಾಡಿ, ಪುತ್ತು ಬಾವ ಹಾಜಿ, ಇಬ್ರಾಹಿಂ ಮದಕ್ಕ, ಫೈರೋಝ್ ಹಾಜಿ ಪರ್ಲಡ್ಕ, ಅಬ್ದುಲ್ ರಶೀದ್ ಹಾಜಿ ನೈತಾಡಿ, ಜಮಾಲುದ್ದೀನ್ ಹಾಜಿ ಮುಖ್ವೆ, ಅಬೂಬಕ್ಕರ್ ಮುಲಾರ್, ಅರ್ಷದ್ ದರ್ಬೆ ಹಾಗು ಮತ್ತಿತ್ತರು ಉಪಸ್ಥಿತರಿದ್ದರು.
ಸ್ಥಳೀಯ ಖತೀಬ್ ಅಬ್ದುಲ್ ಹಮೀದ್ ದಾರಿಮಿ ಸ್ವಾಗತಿಸಿ ಜಮಾಅತ್ ಕಾರ್ಯಾದರ್ಶಿ ಹುಸೈನ್ ವಂದಿಸಿದರು.