ಪುತ್ತೂರು: 03 ಜನವರಿ 2022 ರಂದು ಅಲ್ಪಸಂಖ್ಯಾತ ಅಬಿವ್ರದ್ಧಿ ನಿಗಮದ ರಾಜ್ಯ ಅದ್ಯಕ್ಷರಾದ ಜನಾಬ್ ಮುಕ್ತಾರ್ ಹುಸೇನ್ ಫಕ್ರುದ್ದೀನ್ ಪಾಠಾಣ್ ಪುತ್ತೂರಿಗೆ ಬೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಕಚೇರಿಯಲ್ಲಿ ಅಲ್ಪಸಂಖ್ಯಾತ ಕಾರ್ಯಕರ್ತರ ಸಭೆ ನಡೆಸಿದರು.

ಅಧ್ಯಕ್ಷರೊಂದಿಗೆ ನಿಗಮದ ರಾಜ್ಯ ನಿರ್ದೇಶಕರಾದ ಸಿರಾಜುದ್ದೀನ್ ಭಾಗವಹಿಸಿದ್ದರು.
ಪುತ್ತೂರು ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಅಲ್ಪಸಂಖ್ಯಾತ ಕಾರ್ಯಕರ್ತರ ಸಭೆಯಲ್ಲಿ ಶಾಸಕರಾದ ಶ್ರೀ ಸಂಜೀವ ಮಟಂದೂರು ರವರು ಮಾತನಾಡಿ ಅಲ್ಪಸಂಖ್ಯಾತ ಅಭಿವ್ರದ್ಧಿಗೆ ಇಲಾಖೆ ಕ್ರೂಡಿಕರಿಸಿದ ವ್ಯವಸ್ತೆಗಳನ್ನ ಪುತ್ತೂರಿಗೆ ಬರುವಲ್ಲಿ ಈಗಾಗಲೇ ಶ್ರಮ ವಹಿಸಿದ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅದ್ಯಕ್ಷರಾದ ಸಾಜಾ ರಾಧಾಕೃಷ್ಣ ಆಳ್ವ ,ಪುತ್ತೂರು ನಗರಸಭೆ ಅದ್ಯಕ್ಷರಾದ ಜೀವಂದರ್ ಜೈನ್ ,ನಗರಸಭಾ ಉಪಾದ್ಯಕ್ಷರಾದ ವಿದ್ಯಾ ಗೌರಿ ಉಪಸ್ತಿತರಿದ್ದರು.

ಈ ಸಂದರ್ಭದಲ್ಲಿ ಯುವರಾಜ್, ಹರೀಶ್ ಬೀಜತ್ರೆ,ದಿನೇಶ್ ಜೈನ್,ಪುರುಶೊತ್ತಮ ಮುಂಗ್ಲಿಮನೆ,ಹರಿಪ್ರಸಾದ್,ಜಯಶ್ರೀ,
ಪುತ್ತೂರು ಅಲ್ಪಸಂಖ್ಯಾತ ಮುಖಂಡರುಗಳಾದ
ಉಸ್ಮಾನ್ ನೆಕ್ಕಿಲು,ರಝಾಕ್ ಕೆಜಿಎನ್,ಖಾದರ್ ಕರ್ನೂರ್,ಶರೀಫ್ ಕಾರ್ಜಾಲ್, ಜೊಕೊಬ್ ನೆಲ್ಯಾಡಿ,ಉಮ್ಮರಬ್ಬ ಕೆದಿಲ ,ಕಲಂದರ್ ಪರ್ಪುಂಜ,ಖಾದರ್ ಈಶ್ವರಮಂಗಿಲ ಉಪಸ್ಥಿತರಿದ್ದರು.
ಜಿಲ್ಲೆಯ ಅಲ್ಪಸಂಖ್ಯಾತ ಮೋರ್ಚಾದ ನಾಯಕರುಗಳಾದ ಶಾನವಾಝ್,ವಿಲ್ಫರ್ಡ್ ಸಾಲ್ಧಾನ್ ಪಚ್ಚೆನಾಡಿ, ಅಶ್ರಫ್ ಹರೇಕಲ,ಅಝೀಝ್ ಬೈಕಂಪಾಡಿ,ಹಮೀದ್ ಕೂಲೂರು,ಸಾದಿಕ್ ವಳಚ್ಚಿಲ್ ನ್ಯಾಯವಾದಿ ಅಸ್ಗರ್ ಇನ್ನಿತರ ಬಿಜೆಪಿ ಪಕ್ಷದ ಅಲ್ಪಸಂಖ್ಯಾತ ಮುಖಂಡರುಗಳು ಉಪಸ್ಥಿತರಿದ್ದರು.

ಬಳಿಕ ಮೌಲಾನಾ ಆಜಾದ್ ಶಾಲೆಗೆ ಬೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮತ್ತು ಅದ್ಯಾಪಕರುಗಳೊಂದಿಗೆ ಮಾತನಾಡಿ ಅಗತ್ಯ ಮಾರ್ಗದರ್ಶನ ನೀಡಿ ಶಾಲೆಗೆ ಸಂಬಂಧ ಪಟ್ಟ ಅಗತ್ಯ ಮಾಹಿತಿ ಪಡೆದರು.
ಬಳಿಕ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಶಾಕಿರಣವಾಗಿ ಪುತ್ತೂರು ಕಮ್ಯೂನಿಟಿ ಸೆಂಟರಿಗೆ ಬೇಟಿ ನೀಡಿ ಕಮ್ಯುನಿಟಿ ಸೆಂಟರಿನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮುತೂವರ್ಜಿ ವಹಿಸುವ ಇಂತಹಾ ಕಮ್ಯೂನಿಟಿ ಸೆ೦ಟರ್ ಗಳು ರಾಜ್ಯದೆಲ್ಲೆಡೆ ಪಸರಿಸಲಿ ಎಂದು ಶುಭಹಾರೈಸಿದರು.