ಪುತ್ತೂರು: ಬೈಕ್ ಮತ್ತು ಆಕ್ಟಿವಾ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಪುತ್ತೂರು ಸಮೀಪದ ಮುಕ್ವೆ ಎಂಬಲ್ಲಿ ಇಂದು ನಡೆದಿದೆ.
![](http://dtvkannada.in/wp-content/uploads/2022/01/IMG-20220105-WA0064-1024x512.jpg)
ಪುತ್ತೂರಿನಿಂದ ಸವಣೂರು ಕಡೆ ತೆರಳುತ್ತಿದ್ದ ಬೈಕ್’ಗೆ ಏಕಾಏಕಿ ಆಕ್ಟಿವಾ ವಾಹನ ಅಡ್ಡ ಬಂದ ಪರಿಣಾಮ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಕ್ಟಿವಾ ಸವಾರರಿಗೆ ಗಾಯಗಳಾಗಿವೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
![](http://dtvkannada.in/wp-content/uploads/2022/01/IMG-20220105-WA0062.jpg)
ದಿನಗಳ ಹಿಂದೆ ಇದೇ ಆಕ್ಟಿವಾ ಸವಾರ ತನ್ನ ತಾಯಿಯ ಜೊತೆ ಸಂಚರಿಸುತ್ತಿದ್ದ ವೇಳೆ ಅಪಘಾತಕ್ಕೊಳಗಾಗಿದ್ದ. ಇದೀಗ ಮತ್ತೆ ಆಕ್ಟಿವಾ ಅಪಘಾತವಾಗಿದೆಯೆಂದು ಸಾರ್ವಜನಿಕರು ಮಾತನಾಡುತ್ತಿದ್ದರು.
![](http://dtvkannada.in/wp-content/uploads/2022/01/IMG-20220105-WA0063.jpg)