ಬೆಳ್ತಂಗಡಿ: ಹೋಟೆಲ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ವಿದ್ಯುತ್ ತಂತಿ ಸ್ಕೂಟರ್ ಸವಾರನ ಮೇಲೆ ಬಿದ್ದು ಸವಾರ ದಾರುಣ ಸಾವನ್ನಪ್ಪಿದ ಘಟನೆ ಹೇಡ್ಯಾ ಭಾಗದಲ್ಲಿ ನಿನ್ನೆ ತಡ ರಾತ್ರಿ ಸುಮಾರು 11.30ರ ವೇಳೆಗೆ ಸಂಭವಿಸಿದೆ.

ಮೃತ ಯುವಕನನ್ನು ಕೊಯ್ಯೂರು ನಿವಾಸಿ ರಘು ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಧಾವಿಸಿದ ಅಲ್ ಉಮ್ಮಾ ತಂಡದ ಪಧಾಧಿಕಾರಿಗಾಳದ ಸೈಪ್, ಪಾರೂಕ್, ರಿಯಾಝ್, ಬಶೀರ್, ರಶೀದ್ ರವರು ಪೋಲಿಸ್ ಮೂಲಕ ಕರೆ ಮಾಡಿ ಮಾಹಿತಿ ನೀಡಿದರು.
ಉಜಿರೆ ಮಂಜುನಾಥ ಹೋಟೆಲ್ ಮಾಲಕರಾದ ಮತ್ತು ನಮ್ಮ ಬೆಳ್ತಂಗಡಿಯ ಆಂಬ್ಯುಲೆನ್ಸ್ ಚಾಲಕ ಶರವೇಗದ ಚಾಲಕ ಜಲೀಲ್ ಬಾಬಾ ಹಾಗೂ ಮುಸ್ತಾಕ್ 10 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿ ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಈ ಸಂಧರ್ಭದಲ್ಲಿ ಕಡಿರುದ್ಯಾವರ ಪಂಚಾಯತ್ ಅಧ್ಯಕ್ಷರು ಅಶೋಕ್ ಹಾಗೂ ಮೆಸ್ಕಾಂ ಅಧಿಕಾರಿಗಳಾದ ಜೈ ಹಾಗೂ ರಮೇಶ್ ರವರು ಸಹಕರಿಸಿದರು.