ಬಂಟ್ವಾಳ:- ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಎಂಬಲ್ಲಿನ ತಾಯಿ ಬೀಫಾತ್ತುಮ್ಮ ಎಂಬವರ ಮಗ ಯೂಸುಫ್ ಎಂಬವರು ಕಳೆದ 30 ವರ್ಷದ ಹಿಂದೆ ಕಾಣೆಯಾಗಿದ್ದರು. ಇದೀಗ ಕಾಣೆಯಾದ ಮಗ ಯೂಸುಫ್ ಮರಳಿ ತಾಯಿಯ ಮನೆಗೆ ಸೇರಿದ ಘಟನೆ ವರದಿಯಾಗಿದೆ.

ತನ್ನ ಮಗನ ಬರುವಿಕೆಗಾಗಿ ಕಾಯುತ್ತಾ ಇದ್ದ ತಾಯಿ ಹಾಸಿಗೆ ಹಿಡಿದು ಜೀವನ್ಮರಣದ ನಡುವೆ ಹೋರಾಡುತ್ತಿದ್ದರು. ತಾಯಿ ಬೀಫಾತ್ತುಮ್ಮ ತನ್ನ ಮಗನನ್ನು ದಿನವಿಡೀ ಕರೆಯುತ್ತಿದ್ದರು.
ಇದರ ಬಗ್ಗೆ ಜಮಾತ್ ಕಮಿಟಿಗೆ ಮಾಹಿತಿ ಲಭಿಸಿದ್ದು ಮುಹಿಯುದ್ದೀನ್ ಜುಮಾ ಮಸೀದಿ ಕೊಳತ್ತಮಜಲು ಅಧ್ಯಕ್ಷರು ರಫೀಕ್ ಹೊಯ್ಗೆಅಂಗಡಿ, ಉಪಾಧ್ಯಕ್ಷರು ಯೂಸುಫ್ ಬೆಳುವಾಯಿ, ಹಾಗೂ ಸಿರಾಜ್ ಸೈಟ್, ರಹಿಮಾನ್ ಸೈಟ್, ಇಸ್ಮಾಯಿಲ್ ತಾರಾಬಳಿ ಇವರು ಪಡುಬಿದ್ರೆಯ ಕಾಂಜರಕಟ್ಟೆ ಎಂಬಲ್ಲಿ ವ್ಯಕ್ತಿಯೂ ಇರುವುದನ್ನು ಮನಗಂಡು ದಿನಾಂಕ 07-01-2022 ರಂದು ಸಂಜೆ ಯೂಸುಫ್ ಅವರನ್ನು ಮನವೊಳಿಸಿ ಕರೆ ತಂದಿದ್ದಾರೆ.

ತಾಯಿಯ ಪ್ರೀತಿಗೆ ಬೆಲೆಕಟ್ಟಲಾಗದು. ತಾಯಿ ಮಗ ಒಂದಾಗಲು ಸತತ ಪ್ರಯತ್ನ ಮಾಡಿದ ಜಮಾತ್ ಕಮಿಟಿಯ ನಡೆಗೆ ಜಮಾತ್ ಭಾಂಧವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.