ಉಡುಪಿ: ಅಮಲು ಪದಾರ್ಥ ಸೇವಿಸಿ ಕಾಲೇಜು ವಿದ್ಯಾರ್ಥಿಗಳು ರಂಪಾಟ ನಡೆಸಿರುವ ಘಟನೆ ಉಡುಪಿಯ ಪಡುಬಿದ್ರಿ ಪೇಟೆಯಲ್ಲಿ ನಡೆದಿದೆ. ನಡು ರಸ್ತೆಯಲ್ಲಿ ಇಬ್ಬರು ಯುವಕರು ಮತ್ತು ಓರ್ವ ಯುವತಿಯ ನಡುವೆ ಹೊಡೆದಾಟಗಳು ನಡೆದಿವೆ.
ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಮೂವರೂ, ಪೆಟ್ರೋಲ್ ಖಾಲಿಯಾಗಿ ಸ್ಕೂಟರ್ ನಿಂತಾಗ ಗಲಾಟೆ ಶುರವಚ್ಚಿಕೊಂಡಿದ್ದಾರೆ
ವೈದ್ಯಕೀಯ ವಿದ್ಯಾರ್ಥಿಗಳಾಗಿ ಕೊರೊನಾ ವೀಕೆಂಡ್ ಕರ್ಫ್ಯೂಗೂ ಡೋಂಟ್ ಕೇರ್:
ಸ್ವತಃ ವೈದ್ಯಕೀಯ ವಿದ್ಯಾರ್ಥಿಗಳಾಗಿ ಕೊರೊನ, ವೀಕೆಂಡ್ ಕರ್ಫ್ಯೂಗೂ ಡೋಂಟ್ ಕೇರ್ ಎಂದಿದ್ದಾರೆ. ವಿದ್ಯಾರ್ಥಿಗಳ ಈ ಬೀದಿ ರಂಪಾಟ ಹೆಚ್ಚಾದಾಗ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ಹೋಗಿದೆ. ನಮ್ಮನ್ನು ಮುಟ್ಟಿದರೆ ಪರಿಣಾಮ ಚೆನ್ನಾಗಿರೋಲ್ಲ ಅಂತ ನಶೆಯ ಅಮಲಿನಲ್ಲಿ ಪೊಲೀಸರಿಗೆ ಆವಾಜ್ ಹಾಕಿದ್ದಾರೆ. ಕೊನೆಗೆ ಸಾರ್ವಜನಿಕರ ಸಹಾಯದಿಂದ ಪೊಲೀಸರು ಅಂಬುಲೆನ್ಸ್‌ನಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇವರು ಚೆನೈ ಮೂಲದ ಖಾಸಗಿ ಕಾಲೇಜಿನ ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ವಿದ್ಯಾರ್ಥಿಗಳ ಹೈ ಡ್ರಾಮಾದಿಂದಾಗಿ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆಯಂತೂ ಧಾರಾಳವಾಗಿ ಸಿಕ್ಕಿದೆ. ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.