dtvkannada

ವಿಟ್ಲ : ಮದುವೆಯ ಔತನಕೂಟದ ಸಮಾರಂಭದಲ್ಲಿ ಮದುಮಗನಿಗೆ ಆತನ ಗೆಳೆಯರ ಬಳಗವು ಕೊರಗ ವೇಷ ಹಾಕಿ ಕುಣಿಸಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಉಪ್ಪಳದ ಯುವಕನನ್ನು ಬಂಧಿಸಲು ವಿಶೇಷ ಎರಡು ತಂಡವನ್ನು ವಿಟ್ಲ ಪೊಲೀಸರು ರಚನೆ ಮಾಡಿದ್ದಾರೆ.ಮದುಮಗ ಕೊರಗಜ್ಜನ ವೇಷ ಧರಿಸಿದ ಘಟನೆಯನ್ನು ಗಂಭಿರವಾಗಿ ಪರಿಗಣಿಸಿರುವ ವಿಟ್ಟ ಪೊಲೀಸರು ಎರಡು ವಿಶೇಷ ತನಿಖಾ ತಂಡ ರಚಿಸಿ ತನಿಖೆಯನ್ನು ಆರಂಭಿಸಿದ್ದಾರೆ.
ಈಗಾಗಲೇ ಘಟನೆ ನಡೆದ ವಧುವಿನ ಮನೆಗೆ ತೆರಳಿದ ಪೊಲೀಸರ ತಂಡ ಮಾಹಿತಿಯನ್ನು ಕಲೆಹಾಕಿದ್ದು ಮದುಮಗನ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಮಾಹಿತಿಯನ್ನು ಕಲೆ ಹಾಕಿದ ಪೊಲೀಸರ ತನಿಖಾ ತಂಡ ನೇರವಾಗಿ ಮಂಜೆಶ್ವರ ಠಾಣಾ ವ್ಯಾಪ್ತಿಯಾದ ಉಪ್ಪಳ ಕಡೆ ದೌಡಾಯಿಸಿದ್ದು ತದನಂತರ ಮದುಮಗನ ಅಗರ್ತಿಮೂಲೆಯಲ್ಲಿರುವ ಮನೆಗೆ ತೆರಳಿ ವಿಚಾರಣೆ ನಡೆಸುವುದರ ಜೊತೆಗೆ ಆತನನ್ನು ಮನೆಯಲ್ಲಿಯೂ ಹುಡುಕಾಟ ನಡೆಸಿದ್ದಾರೆ.
ಪೊಲೀಸರ ತನಿಖಾ ಸಮಯದಲ್ಲಿ ವರನಾದ ಉಮರುಲ್ ಬಾಷಿತ್ ಮನೆಯಲ್ಲಿ ಇಲ್ಲದನ್ನು ಖಚಿತ ಪಡಿಸಿಕೊಂಡ ತನಿಖಾ ತಂಡವು ಬರಿಗೈಯಲ್ಲಿ ವಾಪಾಸಾಗಿದ್ದಾರೆ. ಮದುಮದಗನ ವಿರುದ್ದ ಕಲಂ 153ಎ,295ರ ಅಡಿಯಲ್ಲಿ ದೂರು ದಾಖಲಾಗಿರುವ ಹಿನ್ನಲೆಯಲ್ಲಿ ಆರೋಪಿಯು ವಕೀಲರ ಮುಖಾಂತರ ನೀರಿಕ್ಷಣಾ ಜಾಮಿನಿಗಾಗಿ ಮೊರೆ ಹೋಗಿದ್ದಾನೆಂದು ತಿಳಿದು ಬಂದಿದೆ.

ಈಗಾಗಲೇ ಆಕ್ರೋಶದಿಂದಿರುವ ಹಿಂದೂ ಬಾಂದವರು ಹಾಗೂ ಕೆಲವು ಸಂಘಟನೆಗಳು ಕೊರಗಜ್ಜನ ಕ್ಷೇತ್ರಕ್ಕೆ ತೆರಳಿ ಈ ರೀತಿಯ ಕೃತ್ಯ ನಡೆಸಿರುವ ಮದುಮಗನ ವಿರುದ್ದ ಕೊರಗಜ್ಜನಿಗೆ ದೂರು ಸಲ್ಲಿಸಿದ್ದು ಸಾಮೂಹಿಕವಾಗಿ ಪ್ರಾರ್ಥನೆ ನಡೆಸಿದ್ದಾರೆ. “ನನ್ನನ್ನು ಅವಮಾನಿಸಿದವರಿಗೆ ಒಂದು ತಿಂಗಳ ಒಳಗಾಗಿ ಹುಚ್ಚು ಹಿಡಿಸುವನೆಂದು ಭರವಸೆಯನ್ನು ಕೊರಗಜ್ಜ ನೀಡಿದ್ದು”ತಪ್ಪು ಎಸಗಿದ ಆರೋಪಿಯು ದೈವ ಕೊರಗಜ್ಜನ ಬಳಿ ಬಂದು ಕ್ಷಮೆಯನ್ನು ಕೇಳಬೆಕೆಂದು ಹಿಂದೂ ಬಾಂದವರು ಕೇಳಿಕೊಂಡಿದ್ದು ಇಲ್ಲದಿದ್ದಲ್ಲಿ ನೀನೇ ಅವರಿಗೆ ತಕ್ಕ ಶಿಕ್ಷೆಯನ್ನು ನೀಡಬೇಕೆಂದು ಸಂಘಟನೆಯವರು ಕೊರಗಜ್ಜನಲ್ಲಿ ಕೇಳಿಕೊಂಡಿದ್ದಾರೆ. ಘಟನೆಯ ಗಂಭೀರತೆಯನ್ನರಿತ ಸಾರ್ವಜನಿಕರು ಆರೋಪಿಯು ಇರುವ ಸ್ಥಳವನ್ನು ಪೊಲೀಸರಿಗೆ ಸೂಚಿಸಿದ್ದು ಇಂದು ಬಂಧನವಾಗುವ ಸಾಧ್ಯತೆ ಇದೆಯೆಂದು ತಿಳಿದು ಬಂದಿದೆ.

ಘಟನೆಯ ವಿವರ ಮತ್ತು ಏನಿದು ವಿವಾದ?
ಕೊಳ್ನಾಡು ಗ್ರಾಮದ ಅಝೀಝ್ ಎಂಬವರ ಮಗಳ ಮದುವೆ ದಿನ ಈ ಘಟನೆ ನಡೆದಿದ್ದು, ಮಂಜೇಶ್ವರ ತಾಲೂಕಿನ ಉಪ್ಪಳದ ಯುವಕನ ಜೊತೆ ಅಝೀಝ್ ಪುತ್ರಿಯ ವಿವಾಹ ಗುರುವಾರ ಮಧ್ಯಾಹ್ನ ನಡೆದಿತ್ತು, ಸಾವಿರಾರು ಜನರಿಗೆ ಔತಣ ಕೂಟವನ್ನು ಕೂಡ ಏರ್ಪಡಿಸಿದ್ದರು.

ಶುಕ್ರವಾರ ರಾತ್ರಿ ಮುಸ್ಲಿಂಮರ ಸಂಪ್ರದಾಯದಂತೆ ವರ ತನ್ನ 50ಕ್ಕೂ ಹೆಚ್ಚು ಸ್ನೇಹಿತರೊಂದಿಗೆ ವಧುವಿನ ಮನೆಗೆ ಆಗಮಿಸಿದ್ದಾನೆ. ತಡರಾತ್ರಿ ಆಗಮಿಸಿದ ವರನ ಬಳಗ ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತಾ ಬಂದಿದ್ದರು. ಮದುಮಗನನ್ನು ಈತನ ಗೆಳೆಯರು ತಲೆಗೆ ಅಡಿಕೆ ಹಾಳೆಯ ಟೋಪಿ ಹಾಕಿ ಮುಖಕ್ಕೆ ಮಸಿ ಬಳಿದುಕೊಂಡು ಕರೆದುಕೊಂಡು ಬಂದಿದ್ದರು.
ವರ ತಲೆಗೆ ಅಡಿಕೆ ಹಾಳೆಯ ಟೋಪಿ ಹಾಕಿ ಮುಖಕ್ಕೆ ಮಸಿ ಬಳಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡುವಂತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಹಿಂದೂ ಸಂಘಟನೆಗಳಿಂದ ವಧುವಿನ ಮನೆಗೆ ಮುತ್ತಿಗೆ:
ಪ್ರಕರಣ ಸಂಬಂಧಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ವಿಟ್ಲದ ಸಾಳೆತ್ತೂರಿನ ವಧುವಿನ ಮನೆಗೆ ಮುತ್ತಿಗೆ ಯತ್ನ ನಡೆಸಿದ್ದರು. ಇನ್ನು ಕೊರಗಜ್ಜನ ಅವಮಾನ ಮಾಡಿದವರನ್ನು ಶಿಕ್ಷಿಸುವಂತೆ ಆಗ್ರಹಿಸಿ ಕೊರಗಜ್ಜ ಕ್ಷೇತ್ರದಲ್ಲಿ ಭಕ್ತರು ಕೊರಗಜ್ಜನಿಗೆ ಮೊರೆಯಿಟ್ಟ ಘಟನೆಯು ನಡೆದಿತ್ತು.
ಇದಕ್ಕೆ ಅಭಯ ನೀಡಿದ ಕೊರಗಜ್ಜ “ನನ್ನ ವೇಷ ತೊಟ್ಟು ಅವಮಾನಿಸಿದವರನ್ನು ಮಂಕು- ಮರಳು ಮಾಡಿ, ಹುಚ್ಚು ಹಿಡಿಸಿ ಬೀದಿಬೀದಿ ಅಳೆದಾಡಿಸುತ್ತೇನೆ ಎಂಬ ಉತ್ತರ ನೀಡುವ ವೀಡಿಯೋ ಕೂಡ
ವೈರಲ್ ಆಗಿತ್ತು.

ಮುಸ್ಲಿಂ ಸಮುದಾಯದವರಿಂದ ಖಂಡನೆ:
ಘಟನೆ ಸಂಬಂಧ ವರನ ಕೃತ್ಯವನ್ನು ಮುಸ್ಲಿಂ ಮುಖಂಡರು ತೀವ್ರ ಖಂಡಿಸಿದ್ದರು. ಮುಸ್ಲಿಂ ಸಂಪ್ರದಾಯದ ವಿವಾಹ ಪದ್ದತಿಗೆ ಧಕ್ಕೆ ಉಂಟುಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದರು.

ಮದುಮಗನಿಂದ ಕ್ಷಮೆಯಾಚನೆ:
ನನಗೆ ಎಲ್ಲಾ ಧರ್ನದ ಬಗ್ಗೆ ಅಪಾರ ಗೌರವ ಇದೆ. ಯಾವುದೇ ಧರ್ಮದ ನಂಬಿಕೆಗೆ ನೋವುಂಟು ಮಾಡುವ ಉದ್ದೇಶದಿಂದ ಮಾಡಿಲ್ಲ. ಸ್ನೇಹಿತರು ಮುಟ್ಟಾಲೆ ಧರಿಸಿ, ಬಣ್ಣ ಬಳಿದದ್ದು ಮನೋರಂಜನೆಯ ಉದ್ದೇಶಕ್ಕಾಗಿ ಹೊರತು ಅವಹೇಳನ ಮಾಡುವ ಉದ್ದೇಶದಿಂದಲ್ಲ. ಇದರಿಂದ ಮುಸ್ಲಿಂ ಹಾಗೂ ಕೊರಗ ಸಮುದಾಯಕ್ಕೆ ಅವಮಾನ ಉಂಟಾಗಿದ್ದಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ವೀಡಿಯೋ ಮೂಲಕ ತಿಳಿಸಿದ್ದಾನೆ.

By dtv

Leave a Reply

Your email address will not be published. Required fields are marked *

error: Content is protected !!