ವಿಟ್ಲ: ಇದೀಗಾಗಲೇ ತೀವ್ರ ವಿವಾದ ಮತ್ತು ಚರ್ಚೆಗೆ ಕಾರಣವಾಗಿರುವ ಸಾಲೆತ್ತೂರಿನ ಮದುವೆ ಕಾರ್ಯಕ್ರಮದಲ್ಲಿ ಕೊರಗಜ್ಜನ ಅವಮಾನ ಘಟನೆಯ ಬಗ್ಗೆ ಆರೋಪಿಯ ಸ್ವ ಸಮುದಾಯ ಸೇರಿ ಎಲ್ಲಾ ಧರ್ಮದ ಪ್ರಮುಖರು ತೀವ್ರವಾಗಿ ಖಂಡಿಸಿ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಆದರೆ ಪ್ರಕರಣದ ನೈಜ ಆರೋಪಿಯನ್ನು ಬಂಧಿಸಲು ವಿಟ್ಲ ಪೋಲಿಸರಿಗೆ ಸಾಧ್ಯವಾಗಿಲ್ಲ.ಈಗಾಗಲೇ ಆರೋಪಿ ಮತ್ತವನ ಕುಟುಂಬ ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ ಪ್ರಸಂಗವು ನಡೆದಿತ್ತು.
ಇದರ ಮದ್ಯೆ ಒಬ್ಬ ಆರೋಪಿಯನ್ನು ಬಂಧಿಸಿದ್ದು ಆರೋಪಿಯೂ ಅಸ್ಗರ್ ರವರನ್ನು ಸಂಪರ್ಕಿಸಿದ್ದು ತದ ನಂತರ ಪರಿಚಯದ ಹುಡುಗನನ್ನು ಠಾಣೆಯಿಂದ ಬಿಡಿಸಿಕೊಂಡು ಹೋದ ಪ್ರಸಂಗವೂ ನಡೆದಿದ್ದು ಈ ವಿಚಾರಕ್ಕೆ ಸಂಬಂಧಿಸಿ ಪಕ್ಷವೂ ಯುವ ನಾಯಕನನ್ನು ಪಕ್ಷದಿಂದ ಉಚ್ಛಾಟಿಸಿದೆ.
ಬಿಜೆಪಿ ರಾಷ್ಟ್ರೀಯ ಪಕ್ಷದ ಮಂಗಳೂರು ವಿಧಾನ ಸಭಾ ಕ್ಷೇತ್ರದ ಸಾಂಬಾರ್ ತೋಟ ಬೂತ್ 109 ರ ಅಧ್ಯಕ್ಷ ರಾಗಿ ಕಾರ್ಯನಿರ್ವಹಿಸುತ್ತಿದ್ದ ಅಸ್ಗರ್ ರವರ ಅಮಾನತು ತಮ್ಮ ಅಭಿಮಾನಿ ಬಳಗಕ್ಕೆ ತುಂಬಾನೇ ನೋವು ನೀಡಿದ್ದು.
ಎಲ್ಲರೂ ಮಾಡುವಂತೆ ಅವರು ಅವರ ಸಮುದಾಯದ ಒಬ್ಬರಿಗೆ ನಿರಪರಾಧಿ ಎಂದು ಅರಿತು ನ್ಯಾಯ ನೀಡಿದ್ದಾರೆ ಇದು ತಪ್ಪೇ ಎಂದು ಸ್ವತಃ ಪಕ್ಷದ ಕಾರ್ಯಕರ್ತರೇ ಮಾತನಾಡುತ್ತಿದ್ದಾರೆ.
ಅಸ್ಗರ್ ರವರ ಅಮಾನತಿಗೆ ಬಿ.ಜೆ.ಪಿ ಯ ಹಲವಾರು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.