ವಿಟ್ಲ: ಕೊರಗಜ್ಜನ ಪ್ರಕರಣದ ಆರೋಪಿಯನ್ನು ಪೊಲೀಸ್ ಠಾಣೆಯಿಂದ ರಾತ್ರೋ ರಾತ್ರಿ ಬಿಡಿಸಿಕೊಂಡು ಹೋಗಿದ್ದಾರೆ ಎನ್ನುವ ಆರೋಪ ಹೊತ್ತಿದ್ದ ಬಿಜೆಪಿ ಯುವ ನಾಯಕ ಖ್ಯಾತ ನ್ಯಾಯವಾದಿ ಸಾಂಬಾರ್ ತೋಟ 109 ಬೂತಿನ ಬಿಜೆಪಿ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುಡಿಪು ಇವರನ್ನು ಇಂದು ಬಿಜೆಪಿ ಪಕ್ಷಕ್ಕೆ ವಿರೋದವಾಗಿ ನಡೆದುಕೊಂಡಿದ್ದಕ್ಕೆ ಅಮಾನತು ಗೊಳಿಸಿದೆ.
ಪಕ್ಷದಿಂದ ಅಮಾನತು ಗೊಂಡ ಕೆಲ ಸಮಯದಲ್ಲೆ ಅಮಾನತಿನ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಾಕ ಚರ್ಚೆಯಾಗುತ್ತಿದೆ.
ಇದರ ಬೆನ್ನಲ್ಲೇ ಅಸ್ಗರ್ ರವರ ಒಂದಷ್ಟು ವರ್ಷಗಳ ಮುಂಚಿನ ಆಡಿಯೋ ಒಂದು ಅತೀ ಹೆಚ್ಚಾಗಿ ವೈರಲ್ ಆಗುತ್ತಿದ್ದು ಕೇಳಿದಾಗ ಆಶ್ಚರ್ಯವಾಗುತ್ತಿದೆ.
ಮಂಗಳೂರು ವಿಧಾನ ಸಭಾ ಕ್ಷೇತ್ರ ಉಳ್ಳಾಲದಲ್ಲಿ ಈ ಬಾರಿ ಬಿಜೆಪಿ ಗೆಲ್ಲದಿದ್ದಲ್ಲಿ ಜೀವನ ಪರ್ಯಂತ ನಾನು ಕಾಲಿಗೆ ಚಪ್ಪಲಿ ಧರಿಸುವುದಿಲ್ಲ ಎನ್ನುವ ಆಡಿಯೋ ವೈರಲ್ ಆಗುತ್ತಿದ್ದು ಇಂತಹ ಬಿಜೆಪಿ ಅಭಿಮಾನಿಯನ್ನು ಇಂದು ಅಮಾನತು ಮಾಡಲಾಗಿದೆಯೇ ಎಂದು ಎಲ್ಲರೂ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ನಡೆಸುತ್ತಿದ್ದಾರೆ.
ಆ ಬಳಿಕ ನಡೆದ ಈ ಒಂದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯಯರ್ಥಿಯಾಗಿದ್ದ ಯುಟಿ ಖಾದರ್ ಗೆಲುವು ಸಾಧಿಸಿದ್ದರು.