';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಪ್ಪಿನಂಗಡಿ:- SYS ತೆಕ್ಕಾರು ಬ್ರಾಂಚ್ ವತಿಯಿಂದ ಜಲಾಲಿಯ್ಯ ವಾರ್ಷಿಕದ ಅಂಗವಾಗಿ ಇಂದು(11 ಜನವರಿ ಮಂಗಳವಾರ) ಮತ ಪ್ರಭಾಷಣ ಕಾರ್ಯಕ್ರಮ ನಡೆಯಲಿದ್ದು ಖ್ಯಾತ ವಾಗ್ಮಿ ಹಾಫಿಲ್ ಮಸ್ಹೂದ್ ಸಖಾಫಿ ಗೂಡಲ್ಲೂರ್ ತಮಿಳುನಾಡು ಮುಖ್ಯ ಪ್ರಭಾಷಣಗೈಯಲಿದ್ದಾರೆ.
ಬದ್ರಿಯಾ ಜುಮಾ ಮಸ್ಜಿದ್ ತೆಕ್ಕಾರು ಇದರ ಅಂಗಸಂಸ್ಥೆ ಸುನ್ನೀ ಯುವಜನ ಸಂಘ ಪ್ರತಿ ಮೂರು ತಿಂಗಳಿಗೊಮ್ಮೆ ಆಚರಿಸಿಕೊಂಡು ಬರುವ ಹಲವಾರು ಪವಾಡಗಳು ತುಂಬಿರುವ ಜಲಾಲಿಯ್ಯ ಆಧ್ಯಾತ್ಮಿಕ ಮಜ್ಲೀಸ್ ನ ವಾರ್ಷಿಕ ಕಾರ್ಯಕ್ರಮದಲ್ಲಿ ಐತಿಹಾಸಿಕವಾದ ಮತ ಪ್ರಬಾಷಣವನ್ನು ಬಹು ಮಸ್ಹೂದ್ ಸಖಾಫಿ ಮಂಡಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಉಲಮಾಗಳು ಉಮರಾ ನಾಯಕರು ಬಾಗವಹಿಸಲಿದ್ದಾರೆ.
ಕಾರ್ಯಕ್ರಮ ಕೋವಿಡ್ ನಿಯಮಕ್ಕನುಸಾರವಾಗಿ ನಡೆಯಲಿದ್ದು ಸಂಜೆ 6:30ಕ್ಕೆ ಕಾರ್ಯಕ್ರಮ ಪ್ರಾರಂಭಗೊಂಡು ರಾತ್ರಿ 9;30ಕ್ಕೆ ಸಮಾಪ್ತಿಗೊಳ್ಳಲಿದೆ.ಪ್ರಪ್ರಥಮ ಬಾರಿಗೆ ಮಸ್ಹೂದ್ ಸಖಾಫಿ ತೆಕ್ಕಾರಿಗೆ ಆಗಮಿಸುತ್ತಿದ್ದು ಸಹಸ್ರಾರು ಮಂದಿ ಕಾರ್ಯಕ್ರಮದಲ್ಲಿ ಬಾಗವಹಿಸುವ ನಿರೀಕ್ಷೆಯಿದೆ.