';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ದೆಹಲಿ: ಕೇಂದ್ರದ ನವೀಕರಿಸಿದ ನಿಯಮಗಳ ಪ್ರಕಾರ ವಿದೇಶದಿಂದ ಬರುವ ಎಲ್ಲ ಪ್ರಯಾಣಿಕರು ಜನವರಿ 11 ಮಂಗಳವಾರದಿಂದ ಏಳು ದಿನಗಳ ಕಡ್ಡಾಯ ಹೋಮ್ ಕ್ವಾರಂಟೈನ್‌ಗೆ (Home Quarantine) ಒಳಗಾಗಬೇಕಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಅನ್ನು ಬಿಡುಗಡೆ ಮಾಡಿದ್ದು, ಇದು ಜನವರಿ 11 ರಿಂದ ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ಭೂ ಗಡಿಯಿಂದ ಬರುವ ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಇದು ಅನ್ವಯವಾಗಿರುತ್ತದೆ.
ಎಲ್ಲಾ ಪ್ರಯಾಣಿಕರು ಕಳೆದ 14 ದಿನಗಳ ಪ್ರಯಾಣದ ವಿವರಗಳನ್ನು ಒಳಗೊಂಡಂತೆ ನಿಗದಿತ ಪ್ರಯಾಣದ ಮೊದಲು ಆನ್‌ಲೈನ್ ಏರ್ ಟ್ರಾವೆಲ್ ಸುವಿಧಾ ಪೋರ್ಟಲ್‌ನಲ್ಲಿ(Air Travel Suvidha portal) ಸ್ವಯಂ ಘೋಷಣೆ ರೂಪದಲ್ಲಿ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಬೇಕು. ಪ್ರಯಾಣದ ಮೊದಲು 72 ಗಂಟೆಗಳ ಒಳಗೆ ನಡೆಸಿದ RT-PCR ವರದಿಯನ್ನು ಅಪ್‌ಲೋಡ್ ಮಾಡಬೇಕು. ವರದಿಯ ದೃಢೀಕರಣಕ್ಕೆ ಸಂಬಂಧಿಸಿದಂತೆ ಘೋಷಣೆಯನ್ನು ಸಲ್ಲಿಸಬೇಕು