ಉಡುಪಿ: ಮದ್ಯಪಾನ ಮಾಡಿದ ನಶೆಯಲ್ಲಿ ವಾಹನ ಚಲಾಯಿಸಿ ಅವಾಂತರ ಸೃಷ್ಟಿಸಿದ ಯುವಕರಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ನಗರದ ಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.

ಬೆಂಗಳೂರು ಮೂಲದ ಮೂವರು ಯುವಕರು ಕಾರಿನಲ್ಲಿದ್ದರು. ಕುಡಿದ ಮತ್ತಿನಲ್ಲಿ ಚಾಲಕ ಕಾರನ್ನು ಯರ್ರಾಬಿರ್ರಿ ಚಲಾಯಿಸಿ ಕಂಪೌಡ್ ಗೋಡೆಗೆ ಗುದ್ದಿ ,
ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ತಾಯಿ ಮಗು ಭಾರೀ ಅನಾಹುತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಯುವಕರ ಅವಾಂತರಕ್ಕೆ ಸಿಟ್ಟುಗೊಂಡ ಸಾರ್ವಜನಿಕರು ಚಾಲಕ ಮತ್ತು ಕಾರೊಳಗಿದ್ದವರಿಗೆ ಧರ್ಮದೇಟು ನೀಡಿದ್ದಾರೆ.
ಇವರ ಅವಾಂತರದಿಂದಾಗಿ ಎರಡು ಕಾರುಗಳು, ಒಂದು ರಿಕ್ಷಾ ನಜ್ಜುಗುಜ್ಜಾಗಿವೆ. ವಿಷಯ ತಿಳಿದು ಸ್ಥಳಕ್ಜೆ ಉಡುಪಿ ನಗರ ಠಾಣೆಯ ಹೊಯ್ಸಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ರಂಪಾಟ ಮಾಡಿದ ಯುವಕರನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ.