ಬಾಗಲಕೋಟೆ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪತ್ನಿಯ ಪ್ರಿಯಕರನನ್ನು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಚಟ್ನಿಹಾಳ ಗ್ರಾಮದಲ್ಲಿ ನಡೆದಿದೆ. ಅಲ್ಲಾಸಾಬ್ ನದಾಪ್(28) ಕೊಲೆಯಾದ ವ್ಯಕ್ತಿ.
ಚಟ್ನಿಹಾಳ ಗ್ರಾಮದ ರೇಣುಕಾ ಗ್ಯಾನಪ್ಪ ಪೂಜಾರ ಸಂಸಾರದಲ್ಲಿ ಅಲ್ಲಾಸಾಬ್ ನದಾಪ್ ವಿಲನ್ ಆಗಿ ಬಂದಿದ್ದಾನೆ. ಪತಿ ಗ್ಯಾನಪ್ಪ ಇಲ್ಲದಿದ್ದಾಗ ಪ್ರಿಯಕರ ಅಲ್ಲಾಸಾಬ್’ನನ್ನು ರೇಣುಕಾ ಮನೆಗೆ ಕರೆಸಿದ್ದಳು. ಇದೇ ವೇಳೆ ಮನೆಗೆ ಗ್ಯಾನಪ್ಪ ಹಿಂತಿರುಗಿದ್ದರು. ಆಗ ರೇಣುಕಾ ಮತ್ತು ಅಲ್ಲಾಸಾಬ್ ಜೊತೆ ಇರುವುದನ್ನು ಕಂಡು ಗ್ಯಾನಪ್ಪ ದೊಣ್ಣೆಯಿಂದ ಹೊಡೆದು ಹತ್ಯೆಗೈದಿದ್ದಾರೆ. ಹಾಗೂ ಪರಿಸ್ಥಿತಿ ನಿಯಂತ್ರಿಸಲು ಮುಂದೆ ಬಂದ ಪತ್ನಿ ರೇಣುಕಾ ಮೇಲೂ ಹಲ್ಲೆ ನಡೆಸಿದ್ದಾರೆ.
ಸದ್ಯ ಗಾಯಾಳು ರೇಣುಕಾಗೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಕರಣ ಸಂಬಂಧ ಇಳಕಲ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪತಿ ಗ್ಯಾನಪ್ಪ, ಗ್ಯಾನಪ್ಪ ತಂದೆ ಚಂದ್ರಪ್ಪ, ಸಹೋದರ ಹನುಮಂತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.