';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಹುಬ್ಬಳ್ಳಿ: ಪ್ರೀತಿ, ಪ್ರೇಮ ಎಂಬ ಹೆಸರಲ್ಲಿ ಅಪ್ರಾಪ್ತೆಯನ್ನ ಪುಸಾಲಿಯಿಸಿ ಪ್ರಿಯಕರ ಅತ್ಯಾಚಾರ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಗಿರಿಯಾಲ ಗ್ರಾಮದಲ್ಲಿ ನಡೆದಿದೆ.
17 ವರ್ಷದ ಅಪ್ರಾಪ್ತಳನ್ನು ಪ್ರೀತಿಸುತ್ತಿದ್ದ ಯುವಕ ಆಕೆಗೆ ಪುಸಲಾಯಿಸಿ ಜನವರಿ 10 ರಂದು ಮಧ್ಯಾಹ್ನ ನೇಕಾರ ನಗರ ಸೇತುವೆ ಸಮೀಪ ಕರೆಸಿಕೊಂಡಿದ್ದ. ಬಳಿಕ ಕಲಘಟಗಿಯ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ತನ್ನ ಆಸೆಯನ್ನು ಬಿಚ್ಚಿಟ್ಟಿದ್ದ.
ಈ ವೇಳೆ ಅಪ್ರಾಪ್ತೆ ವಿರೋಧ ವ್ಯಕ್ತಪಡಿಸಿದ್ದು ಒತ್ತಾಯಪೂರ್ವಕವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆಯ ತಾಯಿ ಆರೋಪ ಮಾಡಿದ್ದಾರೆ. ಸದ್ಯ ಹುಬ್ಬಳ್ಳಿಯ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.