dtvkannada

ಶಿವಮೊಗ್ಗ: ಗೋವುಗಳಲ್ಲಿ ಗರಿಷ್ಠ ಭಾರತೀಯ ತಳಿಗಳು 20 ರಿಂದ 22 ವರ್ಷಗಳ ಕಾಲ ಬದುಕುತ್ತವೆ. ಆದರೆ, ಸುಬ್ರಾವ್ ಅವರ ‘ನಾಗಿ’ ಎಂಬ ಹಸು 32 ವರ್ಷ ಬದುಕಿದ್ದು ಭಾನುವಾರ ಸಾವನ್ನಪ್ಪಿದೆ. ತನ್ನ ಜೀವಿತಾವಧಿಯಲ್ಲಿ 24 ಕರುಗಳಿಗೆ ಜನ್ಮ ನೀಡಿದ್ದು ವಿಶೇಷತೆಯಾಗಿದೆ.



ಮಲೆನಾಡು ಗಿಡ್ಡ ತಳಿಯ ಹಳ್ಳಿಕಾರು ಹಸು ಹೆಚ್ಚು ಅಂದರೆ 22 ವರ್ಷಗಳ ಕಾಲ ಬದುಕಬಹುದು ಎಂದು ವೈಜ್ಞಾನಿಕವಾಗಿ ಸಾಬೀತಾಗಿರುವಂತಹದು.

ಆದರೆ, ಸಾಗರ ತಾಲೂಕು ಎಡಜಿಗಳೆಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಆನೆಗೊಳಿ ಗ್ರಾಮದ ಗಿಡ್ಡ ತಳಿಯ ನಾಗಿ ಎಂಬ ಹೆಸರಿನ ಹಸುವೊಂದು ಪಶು ವೈದ್ಯಕೀಯ ಲೋಕಕ್ಕೆ ಅಚ್ಚರಿ ಎಂಬಂತೆ 32 ವರ್ಷದ ಸುದೀರ್ಘ ಜೀವನ ಮುಗಿಸಿ ಕೊನೆಯುಸಿರೆಳೆದಿದೆ.

ಮಲೆನಾಡು ಗಿಡ್ಡ ಅಂದರೆ, ಅವು ಮನೆಯಲ್ಲಿ ಮೇಯುವುದೇ ಅಲ್ಲ. ಇವು ಹೆಚ್ಚಾಗಿ ಗುಡ್ಡ ಏರಿ, ಹಳ್ಳದಾಟಿ ಮೇಯುವಂತಹ ನಾಟಿ ಹಸುಗಳು ಎಂಬುವುದು ವಿಶೇಷ.



ಈ ಗೋವು ಎಲ್ಲೂ ಬೇಲಿ ಹಾರದೆ, ಅತ್ಯಂತ ಸೌಮ್ಯ ಸ್ವಭಾವದಿಂದ ಜೀವಿಸಿದ್ದಲ್ಲದೆ, ಒಂದು ದಿನಕ್ಕೆ ಮೂರುವರೆ ಲೀಟರ್ ಹಾಲು ಕೂಡ ನೀಡುತ್ತಿತ್ತು.

ನಾಗಿ ಕಳೆದ ತಿಂಗಳು ಕೊಟ್ಟಿಗೆಯಲ್ಲಿ ಜಾರಿ ಬಿದ್ದು ಕಾಲು ಮುರಿದುಕೊಂಡಿತ್ತು. ಈ ವೇಳೆ ಅದಕ್ಕೆ ಚಿಕಿತ್ಸೆ ನೀಡಲಾಗಿತ್ತು ಅದರೂ ಕೂಡ ಕಳೆದ ಕೆಲ ದಿನಗಳ ಕಾಲ ಮೇಯುವುದನ್ನು ಬಿಟ್ಟಿತ್ತು. ಭಾನುವಾರ ನಾಗಿ ತನ್ನ ಬದುಕಿನ ಪಯಣ ಮುಗಿಸಿದ್ದಾಳೆ.

ಅಂದಹಾಗೆ ನಾಗಿ ಸೇರಿದಂತೆ ತಮ್ಮ ಮನೆಯ ಎಲ್ಲಾ ಹಸುಗಳ ಬಗ್ಗೆ ಸುಬ್ರಾವ್ ಅವರು ದಾಖಲಾತಿಯನ್ನಿಟ್ಟು‌ಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.



ಇಂತಹ ಅಪರೂಪದ ತಳಿಗಳ ನ್ಯಾಷನಲ್ ಡೈರಿ ಆಫ್ ಇಂಡಿಯಾದ ಡಾ. ರಮೇಶ್ ಅವರು ನಾಗಿ ತಳಿಯ ಬಗ್ಗೆ ಹಾಗೂ ನಾಗಿಯ ಜೀನ್ಸ್ ಬಗ್ಗೆ ಸಂಶೋಧನೆ ನಡೆಸಿದ್ದಾರೆಂದು ತಿಳಿದು ಬಂದಿದೆ.

By dtv

Leave a Reply

Your email address will not be published. Required fields are marked *

error: Content is protected !!