ಉಪ್ಪಿನಂಗಡಿ: ತಾಳ ತಪ್ಪುತ್ತಿರುವ ಆಧುನಿಕ ಯುಗದ ಯುವತ್ವವೂ ಕುರ್-ಆನ್ ಮೂಲಕ ಆಧ್ಯಾತ್ಮಿಕತೆ ಮತ್ತು ಶಾಂತಿಯತ್ತ ಮುಖ ಮಾಡಬೇಕೆಂದು ಹಾಫಿಳ್ ಮಸ್ಹೂದ್ ಸಖಾಫಿ ಗೂಡಲ್ಲೂರ್ ಕುರ್-ಆನ್ ಸಂದೇಶ ನೀಡಿದರು.
ಇವರು ಸುನ್ನೀ ಯುವಜನ ಸಂಘ ತೆಕ್ಕಾರು ಬ್ರಾಂಚ್ ಹಮ್ಮಿಕೊಂಡ ಜಲಾಲಿಯ್ಯ ವಾರ್ಷಿಕ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಗೈದರು.
ಇಸ್ಲಾಂ ಶಾಂತಿಯ ಮತ್ತು ಸಹಬಾಳ್ವೆಯ ಧರ್ಮ ಇಲ್ಲಿ ನಡೆಯುವ ಅನಾಚಾರಗಳಿಗೆ ಇಸ್ಲಾಂ ಧರ್ಮಕ್ಕೆ ಬಣ್ಣ ಕಟ್ಟಬೇಡಿ ಕುರ್-ಆನನ್ನು ಅರಿತವನು ನೀಚ ಕೃತ್ಯಗಳಿಗೆ ಇಳಿಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಬ್ಬಾಸ್ ಸಹದಿ ಸರಳಿಕಟ್ಟೆ (ಪೆರ್ನೆ ಉಸ್ತಾದ್) ದುಆ ನೇತೃತ್ವ ನೀಡಿದರು.
ಶೈಖುನ ಮುಕ್ತಾರ್ ತಂಙಳ್ ಕುಂಬೋಲ್ ಜಲಾಲಿಯ್ಯ ಮಜ್ಲೀಸ್ ಗೆ ನೇತೃತ್ವ ನೀಡಿದರು.
ಸ್ಥಳೀಯ ಖತೀಬ್ ಹಂಝ ಸಖಾಫಿ ಅಲ್-ಅಝ್ಹರಿ ತೆಕ್ಕಾರು ಕಾರ್ಯಕ್ರಮವ ಉದ್ಘಾಟಿಸಿದರು,
ಅಲ್-ಹಾಜ್ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಇಸ್ಹಾಕ್ ಮದನಿ, ಉಸ್ಮಾನ್ ಮುಸ್ಲಿಯಾರ್, ಅತಾವಲ್ಲ T.H , ಮುತ್ತಲಿಬ್ ಸಖಾಫಿ ಸರಳಿಕಟ್ಟೆ, ಮುಹೀನುದ್ದೀನ್ ಮದನಿ ಬಾಜಾರ, ನೌಷಾದ್ ಸಹದಿ ಬೈಲಮೇಲು, ಹನೀಫ್ ಮುಸ್ಲಿಯಾರ್ ಕನರಾಜೆ, ಅಬ್ದುಲ್ಲಾ ಅಹ್ಮದ್, ಶರೀಫ್ ಕೆ.ಪಿ, ಮತ್ತಿತ್ತರು ಉಪಸ್ಥಿತರಿದ್ದರು.
M.T ಆದಂ ಬಾಜಾರ ಅಧ್ಯಕ್ಷತೆ ವಹಿಸಿದರು, ಸುಲೈಮಾನ್ ಫಾಳಿಲಿ ಸ್ವಾಗತಿಸಿ,
ನಝೀರ್ ಟಿ.ಕೆ ವಂದಿಸಿದರು.
ಉಸ್ಮಾನ್ ಸಹದಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಹಸ್ರಾರು ಮಂದಿ ಭಾಗವಹಿಸಿದರು.