ಉಪ್ಪಿನಂಗಡಿ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಆದಿತ್ಯ ಹೋಟೆಲ್ ಸಮೀಪ ಹೆದ್ದಾರಿ ಬದಿಯ ತಿರುವಿನಲ್ಲಿ ಅಪಾಯಕಾರಿ ಹೊಂಡವೊಂದು ಬಾಯಿ ತೆರೆದಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿತ್ತು.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಈ ಹಿಂದೆ ಡಿ.ಟಿವಿ ವರದಿ ಪ್ರಸಾರ ಮಾಡಿತ್ತು. ಇದೀಗ ಡಿ.ಟಿವಿ ವರದಿಗೆ ಸ್ಪಂದಿಸಿದ ಅಧಿಕಾರಿ ವರ್ಗ ಗುಂಡಿಯ ಬಳಿ ಮುನ್ನೆಚ್ಚರಿಕಾ ಕ್ರಮವಾಗಿ ತಡೆಬೇಲಿ ಕಟ್ಟುವ ಮೂಲಕ ತಾತ್ಕಾಲಿಕ ಪರಿಹಾರ ನೀಡಿದೆ.

ಈಗಾಗಲೇ ಹೆದ್ದಾರಿಯ ಕೆಲಸ ಪ್ರಗತಿಯಲ್ಲಿದ್ದು ಕೆಲಸದ ವೇಳೆ ಹೊಂಡವನ್ನು ತೆರವುಗೊಳಿಸುವ ಭರವಸೆಯಿದೆ. ಡಿ.ಟಿವಿ ಪ್ರಸಾರ ಮಾಡಿದ ವರದಿಯೂ ಫಲಶ್ರುತಿ ಕಂಡಿದೆ.
