ಬೆಳ್ಳಾರೆ: ಇತಿಹಾಸ ಪ್ರಸಿದ್ದಿ ಹೊಂದಿರುವ ಚೆನ್ನಾವರ ಮುಹಿಯುದ್ದೀನ್ ಜುಮಾ ಮಸೀದಿಯ ಮುಂಬಾಗದಲ್ಲಿ ದೀಪವನ್ನು ಬೆಳಗಿಸಿ ಮಸೀದಿಯ ಆಡಳಿತ ಕಮೀಟಿಗೆ ಮತ್ತು ಮಸೀದಿಯ ವರ್ಚಸ್ಸಿಗೆ ಕಳಂಕ ತರುವಂತಹ ಕೆಲಸವನ್ನು ಮಾಡಿ ಅದರ ಫೊಟೋವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ರೀತಿಯ ಕೃತ್ಯ ನಡೆಸಿದ ಕಿಡಿಗೇಡಿಗಳ ವಿರುದ್ದ ಜಮಾಅತ್ ಕಮೀಟಿಯ ಅಧ್ಯಕ್ಷರು ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಚೆನ್ನಾವರ ಮಸೀದಿಯು ಇತಿಹಾಸ ಪ್ರಸಿದ್ದಿ ಹೊಂದಿರುವ ಮಸೀದಿಯಾಗಿದ್ದು ಇಲ್ಲಿ ಅನೇಕ ಬಾರಿ ಇಂತಹ ಕಿಡಿಕೇಡಿಗಳು ನಾನರೀತಿಯ ಕುಕೃತ್ಯ ನಡೆಸಿದ್ದು ಎಲ್ಲವು ಇಲ್ಲಿಯ ಪವಾಡದಿಂದ ಜಮಾಅತ್ ಕಮೀಟಿಗೆ ಆಗಲಿ ಸಾರ್ವಜನಿಕರಿಗೆ ಅರಿವಾಗುತ್ತದೆ.

ಈ ಮಸೀದಿಯ ವಿಶೇಷವೆನಂದರೆ ಇಲ್ಲಿ ಯಾರೆ ಆಗಲಿ ಮಸೀದಿಗೆ ವಿರುದ್ಧವಾಗಿ ನಡೆದವರು ಅಥವಾ ಮಸೀದಿಯ ವರ್ಚಸ್ಸಿಗೆ ಕಳಂಕ ತಂದವರ್ಯಾರು ಉದ್ದಾರ ಆಗಿಲ್ಲ ಎನ್ನುತ್ತಿದ್ದಾರೆ ಕಮೀಟಿಯ ಉಳಿದ ಸದಸ್ಯರು ಅದು ಇಲ್ಲಿ ನೆಲೆಸಿರುವ ಪವಾಡ ಪುರುಷರ(ಮಶಾಯಿಕಮ್ಮಾರುಗಳ ಖರಮಾತ್) ಪವಾಡವಾಗಿದೆ ಅನ್ನುತ್ತಿದ್ದಾರೆ.
ಈಗಾಗಲೇ ಮಸೀದಿಯ ಬಗ್ಗೆ ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಮಾಅತರಿಂದ ಆಗ್ರಹ ವ್ಯಕ್ತವಾಗಿದ್ದು ಘಟನೆ ಬಗ್ಗೆ ಮಸೀದಿಯ ಅಧ್ಯಕ್ಷರಾದ ಮಹಮ್ಮದ್ ಶಾಫಿ ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ 107 ಕಲಂ ಸೆಕ್ಷನ್ ಅಡಿಯಲ್ಲಿ ಕೇಸು ದಾಖಲಾಗಿದೆ.
ದೀಪ ಬೆಳಗಿಸಿದ ಇಬ್ಬರು ಆರೋಪಿಗಳು ಚೆನ್ನಾವರ ಜಮಾಅತಿಗೊಳಪಟ್ಟ ಇಸ್ಮಾಯಿಲ್ ಹನೀಫಿ ಹಾಗೂ ಅಬೂಬಕ್ಕರ್ ಮದನಿ ಎಂದು ತಿಳಿದು ಬಂದಿದೆ.
ಕಿಡಿಗೇಡಿಗಳ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ:
ಮಸೀದಿಯ ಸಿಸಿ ಟಿವಿಯಲ್ಲಿ ಕಿಡಿಗೇಡಿಗಳು ದೀಪ ಬೆಳಗಿಸಿದ ದೃಶ್ಯ ಸೆರೆಯಾಗಿತ್ತು ಆದರೆ ಕಿಡಿಗೇಡಿಗಳು ದೀಪ ಬೆಳಗಿಸಿ ಬೇರೆ ರೀತಿಯ ಅಡಿ ಬರಹ ಕೊಟ್ಟು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದು ಇದರ ಬಗ್ಗೆ ಜಮಾಅತರ ಗಮನಕ್ಕೆ ಬಂದಿತ್ತು. ಈ ಬಗ್ಗೆ ಚೆನ್ನಾವರ ಜಮಾಅತ್ ಸದಸ್ಯರುಗಳಿಗೆ ಹಲವು ಕಡೆಗಳಿಂದ ಕರೆಗಳು ಬಂದಿದ್ದು ನಂತರ ಬೆಳವಣಿಗೆ ಗಮನಿಸಿದ ಆಡಳಿತ ಕಮಿಟಿ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಆರೋಪಿಗಳು ನಡೆಸಿರುವ ಕೃತ್ಯ ಬಯಲಾಗಿದೆ. ಸಿಸಿ ಟಿವಿ ದೃಶ್ಯ ಆಧರಿಸಿ ಆರೋಪಿಗಳ ವಿರುದ್ಧ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.
ವೀಡಿಯೋ ನೋಡಿ