ಪುತ್ತೂರು: SKSSF ಪುತ್ತೂರು ಕ್ಲಸ್ಟರ್ ಇದರ ವಾರ್ಷಿಕ ಮಹಾ ಸಭೆಯು ಜನವರಿ 13 ರಂದು ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಮದ್ರಸದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶರಫುದ್ದೀನ್ ತಂಙಳ್ ಪುತ್ತೂರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ 2022 -24ನೇ ಸಾಲಿನ ನೂತನ ಪದಾಧಿಕಾರಿಯಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸೈಯ್ಯೆದ್ ಶರಫುದ್ದೀನ್ ತಂಙಳ್ ಸಾಲ್ಮರ ರವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಬಶೀರ್ ಮೌಲವಿ ದಾರಂದಕುಕ್ಕು, ಪ್ರಧಾನ ಕಾರ್ಯದರ್ಶಿಯಾಗಿ ಸಿನಾನ್ ಪರ್ಲಡ್ಕ, ಕೋಶಾಧಿಕಾರಿಯಾಗಿ ಸೂಫಿ ಬಪ್ಪಳಿಗೆ, ಸಂಘಟನಾ ಕಾರ್ಯದರ್ಶಿಯಾಗಿ ನಾಸಿರ್ ದಾರಿಮಿ ಉಜ್ರುಪಾದೆ, ಇಬಾದ್ ಕಾರ್ಯದರ್ಶಿಯಾಗಿ ಮುಸ್ತಫ ಫಾಝಿ ಪರ್ಲಡ್ಕ, ವಿಖಾಯ ಕಾರ್ಯದರ್ಶಿಯಾಗಿ ಬಾತಿಷ ಸಾಲ್ಮರ, ಟ್ರೆಂಡ್ ಕಾರ್ಯದರ್ಶಿಯಾಗಿ ಅಡ್ವಕೇಟ್ ನೂರುದ್ದೀನ್ ಸಾಲ್ಮರ, ಸಹಚಾರಿ ಕಾರ್ಯದರ್ಶಿಯಾಗಿ ಮೂಸೆ ಕುಂಞಿ(ಮೋನು ಬಪ್ಪಳಿಗೆ), ಸರ್ಗಲಯಂ ಕಾರ್ಯದರ್ಶಿಯಾಗಿ ಶಾಫಿ ಮೌಲವಿ ಸಾಲ್ಮರ, ತ್ವಲಬಾ ಕಾರ್ಯದರ್ಶಿಯಾಗಿ ಹಾಶಿಂ ರಹ್ಮಾನಿ ಸಾಲ್ಮರ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಸಲ್ಮಾನ್ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ಶಾಫಿ ಪಾಪೆತ್ತಡ್ಕ ಹಾಗೂ ಶರೀಫ್ ಮುಕ್ರಂಪಾಡಿ ಸಹಕರಿಸದರು.
ಕಾರ್ಯಕಾರಿ ಸಮತಿ ಸದಸ್ಯರಾಗಿ ಬಾತಿಷ ವಲತ್ತಡ್ಕ, ಝುಬೈರ್ ಬಪ್ಪಳಿಗೆ, ಇಸಾಕ್ ಕರ್ಕುಂಜ, ಇರ್ಷಾದ್ U P ಉಜ್ರುಪಾದೆ, ಅಲ್ತಾಫ್ ಸಾಲ್ಮರ, ಇಸ್ಮಾಯಿಲ್ KP, ಆಬಿದ್ ಸಾಲ್ಮರ ಹಾಗೂ ವಲಯ ಕೌನ್ಸಿಲರ್ಸ್ ಆಗಿ ಅಬ್ದುಲ್ ನಾಸಿರ್ ದಾರಿಮಿ ಉಜ್ರುಪಾದೆ, ಮುಸ್ತಫಾ ಪೈಝಿ ಪರ್ಲಡ್ಕ, ಹಾಶಿಂ ರಹ್ಮಾನಿ ಸಾಲ್ಮರ, ಸಿದ್ದೀಕ್ ಪೈಝಿ ಶಾಜ, ಶಾಫಿ ಮೌಲವಿ ಸಾಲ್ಮರ, ಅಶ್ರಫ್ ಹಾಜಿ DK, ನೂರೂದ್ದೀನ್ ಸಾಲ್ಮರ, ಝಬೈರ್ ಬಪ್ಪಳಿಗೆ, ಇಸಾಕ್ ಕರ್ಕುಂಜ, ಮೂಸಕುಂಞ ಬಪ್ಪಳಿಗೆ, ಬಾತಿಷ ವಲತ್ತಡ್ಕ, ಆಶಿಕ್ ಸ್ಕೇಲ್, ಆಫೀಲ್ ಪರ್ಲಡ್ಕ, ಉಮ್ಮರ್ Dk ಎಂಬವರನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿ ನಾಸಿರ್ ದಾರಿಮಿ ಯವರು ಸ್ವಾಗತಿಸಿ ಕಳೆದ ಸಾಲಿನ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಶಾಫಿ ಮೌಲವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ನೂತನ ಕಾರ್ಯದರ್ಶಿ ಸಿನಾನ್ ಪರ್ಲಡ್ಕ ವಂದಿಸಿದರು.