';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಕಾರು ಮತ್ತು ಲಾರಿ ನಜುವೆ ಭೀಕರ ಅಪಘಾತ ಸಂಭವಿಸಿದ ದುರ್ಘಟನೆ ಹಾಸನ ಸಮೀಪದ ಚೆನ್ನರಾಯಪಟ್ಟಣದಲ್ಲಿ ಜನವರಿ 14ರ ಬೆಳಗ್ಗೆ ನಡೆದಿದೆ. ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಈಶ್ವರಮಂಗಲ ಹಾಗೂ ವಿಟ್ಲದ ಈರ್ವರು ಮೃತಪಟ್ಟಿದ್ದಾರೆ.
ಬೆಂಗಳೂರಿನಿಂದ ಊರಿಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಈಶ್ವರಮಂಗಲ ಸಮೀಪದ ಬಂಟುಕಲ್ಲು ನಿವಾಸಿ ಬೆಂಗಳೂರಿನ ಇನ್ಫೋಸಿಸ್ ನಲ್ಲಿ ಉದ್ಯೋಗಿಯಾಗಿದ್ದ ದೇವಿಪ್ರಸಾದ್ ಶೆಟ್ಟಿ ಮತ್ತು ವಿಟ್ಲ ಕೊಳ್ನಾಡು ಗ್ರಾಮದ ಕೆಳಗಿನ ಬಾರೆಬೆಟ್ಟು ನಿವಾಸಿ ದಿ.ಚಂದ್ರಶೇಖರ ಕುಲಾಲ್ ರವರ ಪುತ್ರ ಮುಡಿಪು ಇನ್ಫೋಸಿಸ್ ಉದ್ಯೋಗಿಯಾಗಿದ್ದ ಸುದರ್ಶನ್(32 ವ) ಮೃತಪಟ್ಟವರು ಎಂದು ತಿಳಿದು ಬಂದಿದೆ.
ಅಪಘಾತದ ತೀವ್ರತೆಗೆ ಆಲ್ಟೊ ಕಾರು ನಜ್ಜುಗುಜ್ಜಾಗಿದ್ದು, ಮೃತದೇಹವನ್ನು ಕಾರಿನಿಂದ ಹೊರತೆಗೆಯಲು ಸಾರ್ವಜನಿಕರು ಮತ್ತು ಪೊಲೀಸರು ಹರಸಾಹಸಪಟ್ಟರು.