ಕಡಬ: ರಾಜ್ಯ ಪೊಲೀಸ್ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆದು 39ನೇ ರ‍್ಯಾಂಕ್ ನಲ್ಲಿ ಆಯ್ಕೆಯಾಗಿ ಊರಿಗೆ ಕೀರ್ತಿ ತಂದ ಕಡಬ ತಾಲೂಕು ಕುಂತೂರು ನಿವಾಸಿ ಬದ್ರುನ್ನಿಶಾ ರವರಿಗೆ ಕುಂತೂರು ನಗರಿಕರಿಂದ ಹೂಗುಚ್ಚೆ ನೀಡಿ ಅಭಿನಂದನೆ ಸಲ್ಲಿಸಲಾಯಿತು.
ಉಪ್ಪಿನಂಗಡಿ ಸಮೀಪದ ಕುಂತೂರು ಕೋಚಕಟ್ಟೆ ನಿವಾಸಿ ಎ.ಕೆ. ಇಸ್ಮಾಯಿಲ್ ಹಾಗೂ ಝುಬೈದಾ ಹೆಂತಾರು ದಂಪತಿಯ ನಾಲ್ವರು ಪುತ್ರಿಯರ ಪೈಕಿ ಕೊನೆಯವಳಾದ ಬದ್ರುನ್ನಿಶಾ ಪಿಎಸ್ಐ ಆಗಿ ಆಯ್ಕೆಯಾಗಿದ್ದು, ಊರಿಗೆ ಕೀರ್ತಿ ತಂದಿದ್ದಾಳೆ.
ಈ ಸಂದರ್ಭ ಡಿಟಿವಿ ಕನ್ನಡ ಮಾದ್ಯಮಕ್ಕೆ ಮಾಹಿತಿ ನೀಡಿ ಮಾತನಾಡಿದ ಉದ್ಯಮಿ ಅಬ್ದುಲ್ಲಾ ಮುಡಿಪಿನಡ್ಕ, ನಮ್ಮೂರಿನ ಯುವತಿ ರಾಜ್ಯ ಪೊಲೀಸ್ ಇಲಾಖೆಗೆ ಆಯ್ಕೆಯಾಗಿ ಊರಿಗೆ ಕೀರ್ತಿ ತಂದಿದ್ದು, ಇದು ಸಮುದಾಯ ಹೆಮ್ಮೆ ಪಡುವ ವಿಷಯವಾಗಿದೆ. ಅನ್ಯಾಯ ಅಕ್ರಮ ಭ್ರಷ್ಟಾಚಾರಗಳಿಗೆ ತಲೆಬಾಗದೆ ನ್ಯಾಯ ಪರ ಕಾರ್ಯಾಚರಿಸುವವರಾಗಿ, ಭವಿಷ್ಯದಲ್ಲಿ ಪೊಲೀಸ್ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ ಊರಿಗೆ ಇನ್ನಷ್ಟು ಕೀರ್ತಿ ತರುವಂತಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮುಸ್ಲಿಂ ಅಸೋಶಿಯೇಷನ್ ಅಲ್ಬಾಹ ಘಟಕ ಇದರ ಜೊತೆ ಕಾರ್ಯದರ್ಶಿಯಾದ ಉದ್ಯಮಿ ಉಮರ್ ಹಾಜಿ ಕುಂತೂರು, ಪುತ್ತೂರು ಕೆ.ಎಸ್.ಆರ್.ಟಿ.ಸಿ ಸಂಚಾರಿ ನಿಯಂತ್ರಕರಾದ ಅಬ್ಬಾಸ್ ಕೋಚಕಟ್ಟೆ, ಅಯ್ಯೂಬ್ ಯು.ಕೆ, ಕುಂತೂರು ಜುಮಾ ಮಸೀದಿ ಕಾರ್ಯದರ್ಶಿ ಯಾಕುಬ್ ಕೋಚಕಟ್ಟೆ, ಪುತ್ತುಮೋನು ಮುಡಿಪಿನಡ್ಕ, ಕೆ.ಆರ್ ಹಮೀದ್ ಕುಂತೂರು, ನೌಶಾದ್ ಕೋಚಕಟ್ಟೆ ಉಪಸ್ಥಿತರಿದ್ದರು.
ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಆಗಿ ಆಯ್ಕೆಯಾದ ಬದ್ರುನ್ನೀಶಾ ರವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕುಂತೂರಿನಲ್ಲಿ ಪಡೆದು, ಪ್ರೌಢಶಾಲಾ ಶಿಕ್ಷಣವನ್ನು ಸಂತ ಜಾರ್ಜ್ ಪ್ರೌಢಶಾಲೆ ಕುಂತೂರು ಪದವು ಹಾಗೂ ಪಿಯುಸಿ ಶಿಕ್ಷಣವನ್ನು ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ರಾಮಕುಂಜದಲ್ಲಿ ಮತ್ತು ಯುನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಬೆಂಗಳೂರಿನಲ್ಲಿ ಬಿಎಸ್ಸಿ ಕೃಷಿ ಪದವಿಯನ್ನು ಪಡೆದಿರುತ್ತಾರೆ.