';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕಡಬ: ಕಡಬ ತಾಲೂಕಿನ ಇತಿಹಾಸ ಪ್ರಸಿದ್ಧ ಬೈತಡ್ಕ ದರ್ಗಾ ಶರೀಫಿನಲ್ಲಿ ಅಂತ್ಯವಿಶ್ರಾಂತಿ ಹೊಂದುತ್ತಿರುವ ಮಶ್‌ಹೂರ್ (ರ) ಅವರ ಹೆಸರಿನಲ್ಲಿ ಐದು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಉದಯಸ್ತಮಾನ ಉರೂಸ್ ಇದೇ ಫೆಬ್ರವರಿ 6ರಿಂದ ನಡೆಸಲು ಕಮೀಟಿಯಿಂದ ತಿರ್ಮಾನ ಕೈಗೊಂಡಿದ್ದರು. ಈ ಮೊದಲು ಉರೂಸ್ ಕಮಿಟಿ ಅದಕ್ಕೆ ಬೇಕಾದ ಪ್ರಚಾರವನ್ನೂ ಮಾಡಿತ್ತು.
ಇದೀಗ ಓಮಿಕ್ರಾನ್ ಹಿನ್ನೆಲೆ ಹೆಚ್ಚು ಜನಸೇರಲು ಸರಕಾರದ ನಿರ್ಬಂಧ ಇರುವ ಹಿನ್ನೆಲೆ ಬೈತಡ್ಕ ಉರೂಸನ್ನು ಮುಂದೂಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.