ಮಾಣಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈಎಸ್ ಮಾಣಿ ಸೆಂಟರ್ ಹಾಗೂ ಎಸ್ಸೆಸ್ಸೆಫ್ ಎಸ್‌ವೈಎಸ್ ಸೂರಿಕುಮೇರು ಇದರ ವತಿಯಿಂದ ಇಲ್ಲಿನ ಸಂಜರಿ ಕಾಂಪ್ಲೆಕ್ಸ್ ವಠಾರದಲ್ಲಿ ದೇಶದ 73 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಹೈದರ್ ಸಖಾಫಿ ಶೇರಾ ದುಆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್‌ವೈಎಸ್ ಮಾಣಿ ಸೆಂಟರ್ ಅಧ್ಯಕ್ಷ ಸುಲೈಮಾನ್ ಸಅದಿ ಪಾಟ್ರಕೋಡಿ ಸ್ವಾಗತಿಸಿ, ಗಣರಾಜ್ಯೋತ್ಸವ ಭಾಷಣ ಮಾಡಿದರು. ಕೆಸಿಎಫ್ ರಿಯಾದ್ ಝೋನ್ ಸಂಘಟನಾ ಕಾರ್ಯದರ್ಶಿ ಮುಸ್ತಫಾ ಸಅದಿ ಸೂರಿಕುಮೇರು ಮತ್ತು ಯೂಸುಫ್ ಹಾಜಿ ಸೂರಿಕುಮೇರು ಧ್ವಜಾರೋಹಣಗೈದರು.
ಎಸ್ಸೆಸ್ಸೆಫ್ ವಿದ್ಯಾರ್ಥಿಗಳಾದ ಅಜ್ಮಲ್ ಮಾಣಿ,ಫಝಲ್ ಸೂರಿಕುಮೇರು,ಸವಾದ್ ಮಾಣಿ,ಇಮ್ರಾನ್ ಸೂರಿಕುಮೇರು,ಮುಹೈಮಿನ್ ಸೂರಿಕುಮೇರು,ರಾಷ್ಟಗೀತೆ ಹಾಡಿದರು,ಕಾರ್ಯಕ್ರಮದಲ್ಲಿ ಸೆಂಟರ್ ಕೋಶಾಧಿಕಾರಿ ದಾವೂದ್ ಕಲ್ಲಡ್ಕ,ಎಸ್‌ವೈಎಸ್ ಸೂರಿಕುಮೇರು ಉಪಾಧ್ಯಕ್ಷರಾದ ಹಂಝ ಕಾಯರಡ್ಕ, ರಫೀಕ್ ಮದನಿ ಪಾಟ್ರಕೋಡಿ,ಕೆಪಿ.ಕಾಸಿಂ ಪಾಟ್ರಕೋಡಿ,ಬಿಎಂಕೆ,ಅಬ್ದುಲ್ ಅಝೀಝ್ ಪಾಟ್ರಕೋಡಿ,ಹಬೀಬ್ ಶೇರಾ ಮುಂತಾದವರು ಉಪಸ್ಥಿತರಿದ್ದರು.
ಎಸ್‌ವೈಎಸ್ ಮಾಣಿ ಸೆಂಟರ್ ಸಾಂತ್ವನ ಕಾರ್ಯದರ್ಶಿ ಎಸ್ ಆರ್ ಸುಲೈಮಾನ್ ಸೂರಿಕುಮೇರು ಧನ್ಯವಾದಗೈದರು. ಎಸ್‌ವೈಎಸ್ ಸೂರಿಕುಮೇರು ಬ್ರಾಂಚ್ ಕಾರ್ಯದರ್ಶಿ ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.