dtvkannada

ಸುಳ್ಯ: ಭಾರತ ದೇಶದ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಕಲ್ಲುಗುಂಡಿ ಹಯಾತುಲ್ ಇಸ್ಲಾಂ ಮದ್ರಸಾದಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು.

ಜಮಾಅತ್ ಅಧ್ಯಕ್ಷರಾದ ಅಬ್ಬಾಸ್ ಹಾಜಿಯವರು ಧ್ವಜಾರೋಹಣ ನೆರವೇರಿಸಿ ಪ್ರಾಸ್ತಾವಿಕ ಭಾಷಣ ನಡೆಸಿದರು . ಗಣರಾಜ್ಯೋತ್ಸವದ ಹಿನ್ನೆಲೆಯನ್ನು ವಿವರಿಸಿದ ಅವರು ನವ ತಲೆಮಾರಿನ ಮಕ್ಕಳು ಭಾರತದ ನೈಜ ಇತಿಹಾಸ ಮತ್ತು ಸಂವಿಧಾನದ ಕುರಿತು ಸರಿಯಾದ ಮಾಹಿತಿಯನ್ನು ಹೊಂದಿರಬೇಕು. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆಯುತ್ತಿರುವಂತಹ ಷಡ್ಯಂತ್ರಗಳನ್ನು ಎದುರಿಸಲು ಈಗಿಂದಲೇ ಸಿದ್ಧರಾಗಬೇಕು ಎಂದು ಕರೆ ನೀಡಿದರು .

ಪ್ರಾರ್ಥನೆಗೆ ನೇತೃತ್ವ ನೀಡಿದ ಸ್ಥಳೀಯ ಖತೀಬರಾದ ಅಹ್ಮದ್ ನ‌ಈಂ ಫೈಝಿ ಮ‌ಅ’ಬರಿಯವರು ಗಣರಾಜ್ಯೋತ್ಸವದ ಸಂದೇಶ ಭಾಷಣವನ್ನು ನೆರವೇರಿಸಿದರು. ಮದರಸಾದ ಎಸ್ಕೆ.ಎಸ್.ಬಿ.ವಿ ವಿದ್ಯಾರ್ಥಿಗಳಿಂದ ಬಾಲ ಇಂಡಿಯಾ ಕಾರ್ಯಕ್ರಮ ನಡೆಯಿತು .

ದೇಶಭಕ್ತಿ ಗೀತೆಯನ್ನು ಹಾಡಿದ ವಿದ್ಯಾರ್ಥಿಗಳಿಗೆ ಮದ್ರಸ ಪ್ರಾಧ್ಯಾಪಕರಾದ ಅಬ್ದುನ್ನಾಸಿರ್ ಫೈಝಿಯವರು ದೇಶ ಬದ್ಧತೆಯ ಪ್ರತಿಜ್ಞಾವಿಧಿ ಬೋಧಿಸಿದರು. ಮದ್ರಸಾ ಅಧ್ಯಾಪಕರು, ಊರ ಹಿರಿಯರು, ಆಡಳಿತ ಸಮಿತಿ ಸದಸ್ಯರು, ಪೋಷಕರು ಮತ್ತು ಯುವಕರು ಉಪಸ್ಥಿತರಿದ್ದರು. ಕಮ್ಯುನಿಟಿ ವೆಲ್ಫೇರ್ ಫೌಂಡೇಶನ್ ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.

By dtv

Leave a Reply

Your email address will not be published. Required fields are marked *

error: Content is protected !!