ಬಂಟ್ವಾಳ: ನಂದಾವರ ಸಮೀಪದ ದಾಸರಗುಡ್ಡೆಯ ಬದ್ರಿಯಾ ಜುಮಾ ಮಸೀದಿಗೆ ನೀರಿನ ಅಭಾವವಿದ್ದು, ಕೊಳವೆ ಬಾವಿಯ ಅಗತ್ಯವಿದೆ ಎಂದು ಮನವಿ ಬಂದಾಗ ದಾನಿ ಒಬ್ಬರ ಸಹಕಾರದಿಂದ ದ.ಕ ಜಿಲ್ಲೆಯ ಪ್ರತಿಷ್ಠಿತ ಎಮ್.ಎನ್.ಜಿ.ಫೌಂಡೇಶನ್ ಸಂಸ್ಥೆಯು ಮಸೀದಿಗೆ ಬೋರ್‌ವೆಲ್ ವ್ಯವಸ್ಥೆಯನ್ನು ಕಲ್ಪಿಸಿದರು.

ಈ ಸಂದರ್ಭದಲ್ಲಿ ಮಸೀದಿಯ ಖತೀಬರಾದ ನಾಸಿರ್ ಫೈಝಿ ದುಆದೊಂದಿಗೆ ಚಾಲನೆ ನೀಡಿದರು. ಉಸ್ತಾದರಾದ ಶರೀಫ್ ಯಮನಿ, ಮಸೀದಿಯ ಅಧ್ಯಕ್ಷರಾದ ಎಮ್.ಕೆ. ಲತೀಫ್, ಉಪಾಧ್ಯಕ್ಷರಾದ ಇಬ್ರಾಹಿಂ ಎಮ್.ಎಮ್, ಕಾರ್ಯದರ್ಶಿ ಇಲ್ಯಾಸ್ ಎಮ್.ಎಮ್. ಹಾಗೂ ಎಮ್.ಎನ್.ಜಿ. ಫೌಂಡೇಶನ್ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಇಲ್ಯಾಸ್ ಮಂಗಳೂರು, ಪದಾಧಿಕಾರಿಗಳಾದ ಎಮ್.ಎಮ್.ಮೋನು ನಂದಾವರ, ಇಸಾಕ್ ತುಂಬೆ, ಮನ್ಸೂರ್ ಬಿ.ಸಿ.ರೋಡ್, ರಫೀಕ್ ಪರ್ಲಿಯಾ, ಮುಖ್ತಾರ್ ಅಕ್ಕರಂಗಡಿ ಮತ್ತು ಸದಸ್ಯರಾದ ಫೈಝಲ್ ಸಂತೋಷ್ ನಗರ, ನಿಝಾಮ್ ಬೈತಾರ್, ಫಯಾಝ್ ಸಂತೋಷ್ ನಗರ, ಹನೀಫ್ ಸಜೀಪ ಉಪಸ್ಥಿತರಿದ್ದರು.

