ಪುತ್ತೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು, ಪುರುಷರಕಟ್ಟೆ ಘಟಕ ಇದರ ವತಿಯಿಂದ 73 ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ನಡೆಯಿತು.
ಧ್ವಜಾರೋಹಣ ನೆರವೇರಿಸಿ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಸಾದಿಕ್ ಜಾರತ್ತಾರ್ ಮಾತನಾಡಿ ದೇಶದ ಸಂವಿಧಾನ ಜನರಿಗೆ ನೀಡಿರುವ ಹಕ್ಕುಗಳನ್ನು ಆಳುವ ಸರ್ಕಾರಗಳು ಕಸಿಯುತ್ತಿವೆ ಮತ್ತು ಜನ ವಿರೋಧಿ ನೀತಿಗಳನ್ನು ಜಾರಿಗೆ ತರಲಾಗುತ್ತಿದೆ. NEP ಯ ಮುಖಾಂತರ ಫ್ಯಾಶಿಷ್ಟ್ ಸಿದ್ದಾಂತವನ್ನು ಹೇರುತ್ತಿದ್ದಾರೆ. ಸಂಪತ್ತನ್ನು ಒಂದು ಕಡೆ ಕ್ರೋಡೀಕರಿಸಲಾಗುತ್ತಿದೆ. ಹತ್ರಾಸ್ ಕುಟುಂಬಕ್ಕೆ ಸಂತ್ವಾನ ಹೇಳಲು ಹೋದ ಕ್ಯಾಂಪಸ್ ಫ್ರಂಟ್ ನಾಯಕರನ್ನು ಕೇಂದ್ರ ಮತ್ತು ಯೋಗಿಯ ಸರಕಾರ ಯುಎಪಿಯ ಹಾಕಿ ಬಂಧಿಸಿತು. ಇದೆಲ್ಲವೂ ಸರ್ವಾಧಿಕಾರ ಸರ್ಕಾರದ ಲಕ್ಷಣಗಳಾಗಿದ್ದು, ಇದನ್ನು ತಡೆಯಲು ವಿದ್ಯಾರ್ಥಿ ಸಮೂಹ ಮುಂದೆ ಬರಬೇಕಾಗಿದೆ ಎಂದರು.
ಈ ಸಂಧರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಮುಖಂಡ ಅಫ್ರೀದ್ ಕೂರ್ನಡ್ಕ, ಯೂನಿಟ್ ನಾಯಕರು, ಸದಸ್ಯರು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.