dtvkannada

ಸವಣೂರು: ಸವಣೂರು ಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನಡೆಸಲಾಯಿತು.

ಎಸ್‌ಡಿ‌ಎಂ‌ಸಿ ಅಧ್ಯಕ್ಷರಾದ ರಫೀಕ್ ಎಂ ಎ ಇವರು ಧ್ವಜಾರೋಹಣವನ್ನು ನೇರವೇರಿಸಿದರು.

ಈ ಸಂದರ್ಭದಲ್ಲಿ ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ರಝ್ಝಾಕ್ ಕೆನರಾ, ಶ್ರೀಮತಿ ಚೆನ್ನು, SDMC ಸದಸ್ಯರಾದ ಉಮ್ಮರ್ ಎಸ್, ಅಬ್ದುಲ್ಲ ಎಸ್ ಇ, ಹಮೀದ್ ಎಸ್, ರಝ್ಝಾಕ್ ಎಂ, ರಫೀಕ್ ನೆಕ್ಕರೆ ಹಾಗು ಸಿಬ್ಬಂದಿಗಳು ಅಧ್ಯಾಪಕರು ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯಗುರು ಶ್ರೀಮತಿ ಪುಷ್ಪಾವತಿ ಸ್ವಾಗತಿಸಿ, ಶಿಕ್ಷಕಿ ಶ್ವೇತಾ ವಂದನಾರ್ಪಣೆ ಮಾಡಿದರು. ಶಿಕ್ಷಕರಾದ ಮಮತಾ, ಕವಿತಾ, ದಯಾಮಣಿ ಕಾರ್ಯಕ್ರಮ ನಿರೂಪಿಸಿದರು.

By dtv

Leave a Reply

Your email address will not be published. Required fields are marked *

error: Content is protected !!