ಉಪ್ಪಿನಂಗಡಿ: ಒಬ್ಬರ ತಪ್ಪುಗಳನ್ನು ಮರೆಮಾಚುವವನಾಗಿದ್ದಾನೆ ಇಲ್ಲಿ ಶ್ರೇಷ್ಠನು ಒಬ್ಬ ತಪ್ಪು ಮಾಡಿದರೆ ಅದನ್ನು ಎಲ್ಲರಲ್ಲೂ ರಟ್ಟು ಮಾಡುವುದಲ್ಲ ಒಳ್ಳೆತನದ ಲಕ್ಷಣ ಅಂತವನಿಗೆ ಇಸ್ಲಾಂ ನಲ್ಲಿ ಕಠಿಣ ಶಿಕ್ಷೆ ಕಾದಿದೆ ಎಂದು ಹಬೀಬುಲ್ಲಾ ತಂಙಳ್ ಕುಪ್ಪೇಟಿ ,SSF ಉಪ್ಪಿನಂಗಡಿ ಡಿವಿಷನ್ ಇಂದು ಉಪ್ಪಿನಂಗಡಿ ಸುನ್ನೀ ಸೆಂಟರ್ ನಲ್ಲಿ ಹಮ್ಮಿಕೊಂಡ ಸುಹ್ಬಾ ಲೀಡರ್ಸ್ ಕ್ಯಾಂಪ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತರಗತಿ ಮಂಡಿಸಿ ಮಾತನಾಡಿದರು.
SSF ಉಪ್ಪಿನಂಗಡಿ ಡಿವಿಷನ್ ವತಿಯಿಂದ ಉಪ್ಪಿನಂಗಡಿ ವ್ಯಾಪ್ತಿಯ ಎಲ್ಲಾ ಸೆಕ್ಟರ್ ಗಳ ಕಾರ್ಯಕಾರಿಣಿ ಸದಸ್ಯರ ಲೀಡರ್ಸ್ ಕ್ಯಾಂಪ್ ಉಪ್ಪಿನಂಗಡಿ ಸುನ್ನೀ ಸೆಂಟರ್ ನಲ್ಲಿ ನಡೆಯಿತು.
ಆಧುನಿಕ ಕಾಲದ ಯುವತ್ವ ಮತ್ತು ಮುಸ್ಲಿಮನ ಆಧ್ಯಾತ್ಮಿಕತೆಯ ಕುರಿತು ಅರ್ಥ ಪೂರ್ಣ ತರಗತಿಯನ್ನು ತಂಙಳ್ ಮಂಡಿಸಿದರು.
ಕಾರ್ಯಕ್ರಮದಲ್ಲಿ ಮುಹಮ್ಮದ್ ಮಿಸ್ ಬಾಹಿ ಅಧ್ಯಕ್ಷತೆ ವಹಿಸಿದರು.
ಇಸ್ಹಾಕ್ ಮದನಿ ಆಳಕ್ಕೆ ಉದ್ಗಾಟಿಸಿದರೆ
ಇಬ್ರಾಹಿಂ ಸಹದಿ ಕಳಂಜಿಬೈಲ್, ಮುಸ್ತಫಾ ಯು.ಪಿ, ಅಬ್ದುಲ್ ರಹ್ಮಾನ್ ಪದ್ಮುಂಜ ಮತ್ತಿತ್ತರು ಉಪಸ್ಥಿತರಿದ್ದರು.ಶರೀಫ್ ಸಖಾಫಿ ಉಜಿರ್ಬೆಟ್ಟು ಸ್ವಾಗತಿಸಿ ಡಿವಿಷನ್ ಪ್ರಧಾನ ಕಾರ್ಯದರ್ಶಿ ಶರೀಫ್ ಕಲ್ಲಾಜೆ ವಂದಿಸಿದರು.
ಡಿವಿಷನ್ ವ್ಯಾಪ್ತಿಯ 6 ಸೆಕ್ಟರ್ ಗಳ ಹಲವಾರು ಕಾರ್ಯಕಾರಿಣಿ ಸದಸ್ಯರು ಕ್ಯಾಂಪ್ ನಲ್ಲಿ ಬಾಗವಹಿಸಿದರು.