ಉಪ್ಪಿನಂಗಡಿ: ಬದ್ರಿಯಾ ಜುಮಾ ಮಸ್ಜಿದ್ ತೆಕ್ಕಾರು ವತಿಯಿಂದ ಗಣರಾಜ್ಯೋತ್ಸವ ಕಾರ್ಯಕ್ರಮ ತೆಕ್ಕಾರು ಮದ್ರಸಾ ವಠಾರದಲ್ಲಿ ಇಂದು ಬೆಳಿಗ್ಗೆ ಧ್ವಜಾರೋಹಣ ಮೂಲಕ ನಡೆಯಿತು.
ಶಾಂತಿ, ಸೌಹಾರ್ದತೆಯ ಸುಂದರ ಭಾರತದಲ್ಲಿ ಸಂವಿಧಾನದ ಉಳಿವಿಗಾಗಿ ಬೀದಿಗಿಳಿಯಬೇಕಾದ ಪರಿಸ್ಥಿತಿ ಎದುರಾಗಿದ್ದು ಖೇದಕರವಾಗಿದೆ ಎಂದು ಬದ್ರಿಯಾ ಜುಮಾ ಮಸ್ಜಿದ್ ತೆಕ್ಕಾರು ಖತೀಬ್ ಹಂಝ ಸಖಾಫಿ ಅಲ್-ಅಝ್ಹರಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸಂವಿಧಾನ ಚಾಲ್ತಿಯಲ್ಲಿ ಬಂದಾಗ ಭಾರತ ಅರ್ಥಪೂರ್ಣಗೊಂಡಿದ್ದು ಆದರೆ ಅದೇ ಸಂವಿಧಾನವನ್ನು ಇಲ್ಲಿ ದುರುಪಯೋಗ ಪಡಿಸುತ್ತಿರುವುದು ಕೇದಕರ ಎಂದು ಅವರು ಖಂಡನೆ ವ್ಯಕ್ತಪಡಿಸಿದರು.
ಉಸ್ಮಾನ್ ಸಹದಿ ತೆಕ್ಕಾರು ಸಂವಿಧಾನ ರಚನೆ ಮತ್ತು ದೇಶದ ಕುರಿತು ಸಂದೇಶ ಬಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಇಸ್ಹಾಕ್ ಮದನಿ, ಉಸ್ಮಾನ್ ಮುಸ್ಲಿಯಾರ್, ಶರೀಫ್ ಕೆ.ಪಿ, ಅಶ್ರಫ್ ಲತೀಫಿ, ನಝೀರ್ ಟಿ.ಕೆ. ಉಪಸ್ಥಿತರಿದ್ದರು.
ಇದೇ ವೇಳೆ ಗಣರಾಜ್ಯೋತ್ಸವದ ಅಂಗವಾಗಿ SBS ವಿದ್ಯಾರ್ಥಿಗಳಿಗೆ ಕ್ವಿಝ್ ಕಾರ್ಯಕ್ರಮ ನಡೆದಿದ್ದು
ಉಸಾಮ ಮತ್ತು ಸಂಬ್ರಿನಾ ಪ್ರಥಮ ಸ್ಥಾನ ಪಡೆದಿದ್ದು, ಸಫೀನಾ ಮತ್ತು ಫರ್ಹತ್ ದ್ವಿತೀಯ ಸ್ಥಾನ ಪಡೆದರು.ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಆಡಳಿತ ಸಮಿತಿ, SSF, SYS, SBS, ಯಂಗ್ ಮೆನ್ಸ್ ನ ಹಲವಾರು ಕಾರ್ಯಕರ್ತರು ಬಾಗವಾಹಿಸಿದರು.ಆಶಿಕ್ T.H ಸ್ವಾಗತಿಸಿ ವಂದಿಸಿದರು.