ಈಶ್ವರಮಂಗಲ ಜ-26: SDPI ನೆಟ್ಟಣಿಗೆ ಮುಡ್ನೂರು ಗ್ರಾಮ ಸಮಿತಿ ವತಿಯಿಂದ ಪಕ್ಷದ ಕಚೇರಿ ಮುಂಭಾಗದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ಗ್ರಾಮ ಸಮಿತಿ ಅಧ್ಯಕ್ಷರಾದ ಸಾದಿಕ್ ಪಿ ಧ್ವಜಾರೋಹಣಗೈದರು. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಅಬ್ದುಲ್ ಲತೀಫ್ ಗಣರಾಜ್ಯೋತ್ಸವದ ಸಂದೇಶ ನೀಡುತ್ತಾ ‘ದೇಶದ ಪ್ರತಿಯೊಬ್ಬ ನಾಗರೀಕನು ದೇಶವನ್ನು ವಿವಿಧ ರೂಪದಲ್ಲಿ ಇರುವ ಪ್ಯಾಶಿಷ್ಟ್‌ಗಳು ಮತ್ತು ನಿರುಂಕುಶ ಶಕ್ತಿಗಳ ಹಿಡಿತದಿಂದ ರಕ್ಷಿಸಲು ಬದ್ದರಾಗಬೇಕು, “ಜಾತ್ಯಾತೀತ” ಮತ್ತು “ಸಮಾಜವಾದಿ” ಎಂಬ ಪದಗಳನ್ನು ಸಂವಿಧಾನದ ಪೀಠಿಕೆಯಿಂದ ತೆಗೆದುಹಾಕಲು ತೀವ್ರ ಪ್ರಯತ್ನಗಳು ನಡೆಯುತ್ತಿದೆ. ಇದು ಸ್ಪಷ್ಟವಾಗಿ ‘ಹಿಂದು ರಾಷ್ಟ್ರ’ ಎಂದು ಘೋಷಿಸಲು ಮನುವಾದಿಗಳ ಪಿತೂರಿಯ ಒಂದು ಭಾಗವಾಗಿದೆ ಇದರ ವಿರುದ್ದ ಪ್ರತಿಯೊಬ್ಬ ನಾಗರೀಕರು ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನೆ.ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಸಂಶುದ್ದೀನ್, ಗ್ರಾಮ ಸಮಿತಿ ಕಾರ್ಯದರ್ಶಿ ಜಮಾಲ್ ಉಪಸ್ಥಿತರಿದ್ದರು.
ರಶೀದ್ ಇಂಡೋ ಸ್ವಾಗತಿಸಿ, ಧನ್ಯವಾದಗೈದರು.