ಉಪ್ಪಿನಂಗಡಿ: ದೇಶಾದ್ಯಂತ 73ನೇ ಗಣರಾಜ್ಯೋತ್ಸವ ಬಾರೀ ಸಂಭ್ರಮದಿಂದಲೇ ಆಚರಿಸಿದ್ದು ಆದರೆ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮ ಪಂಚಾಯತ್ ನಲ್ಲಿ ಗಣರಾಜ್ಯೋತ್ಸವ ಆಚರಿಸದೇ ಅಧಿಕಾರಿಗಳು ಅಸಡ್ಡೆ ತೋರಿಸಿದ್ದಾರೆ.
ಇದೀಗ ಅಧಿಕಾರಿಗಳ ನಡೆಯ ವಿರುದ್ಧ ಅಲ್ಲಿನ ಸಾರ್ವಜನಿಕರು ರೊಚ್ಚಿಗೆದ್ದಿದ್ದಾರೆ ಸರ್ಕಾರಿ ಇಲಾಖೆಯಲ್ಲಿಯೇ ಇಂತಹ ಉದಾಸೀನತೆ ತೋರಿದ್ದು ಕೇದಕರವಾಗಿದೆ.
ಅಧಿಕಾರಿ ಮತ್ತು ಪಂಚಾಯತ್ ಜನ ಪ್ರತಿನಿಧಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಪಂಚಾಯತ್ ಸದಸ್ಯರೊಬ್ಬರು ಮಾತನಾಡಿ ತಮ್ಮ ವ್ಯಾಪ್ತಿಯಲ್ಲಿ ಶೀತ, ಜ್ವರ ಹೆಚ್ಚಾಗಿದ್ದು ಆ ನಿಟ್ಟಿನಲ್ಲಿ ಪಂಚಾಯತ್ ಕಚೇರಿಗೆ ಹೋಗಿಲ್ಲ ಎಂದು ಹೇಳಿದ್ದು ಮದುವೆ ಸಮಾರಂಭ ಪೇಟೆಗೆ ಹೋಗುವಾಗ ಈ ನಿಯಮಗಳು ಪಂಚಾಯತ್ ಸದಸ್ಯರಿಗೆ ಅನ್ವಯವಾಗುದಿಲ್ಲವೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾರ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಶರತ್ ಕುಮಾರ್ ಮಾತನಾಡಿ ನನಗೆ ಇಲ್ಲಿ ಗಣರಾಜ್ಯೋತ್ಸವದ ಬಾಬ್ತು ಮತ್ತು ಆಚರಣೆಯ ಬಗ್ಗೆ ಯಾವುದೇ ಮಾಹಿತಿ ನನಗೆ ಸಿಕ್ಕಿಲ್ಲ, ಪಿ.ಡಿ.ಓ ಕೂಡ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಹೇಳಿ ಬೇಜವಾಬ್ದಾರಿಯಿಂದ
ಕೈ ತೊಳೆದುಕೊಂಡಿದ್ದಾರೆ.
ಒಟ್ಟಾರೆ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ನಾಗರೀಕರು ರೊಚ್ಚಿಗೆದ್ದಿದ್ದಾರೆ.