ಪಾಟ್ರಕೋಡಿ: SSF ಪಾಟ್ರಕೋಡಿ ಶಾಖೆ ಮಹಾಸಭೆಯು ದಿನಾಂಕ 26-01-2022 ಬುಧವಾರ ಸಂಜೆ 7-30ಕ್ಕೆ ತಾಜುಲ್ ಉಲಮಾ ಸುನ್ನಿ ಸೆಂಟರ್ ನಲ್ಲಿ ನಡೆಯಿತು. SYS ಮಾಣಿ ಸೆಂಟರ್ ಅಧ್ಯಕ್ಷರಾದ ಸುಲೈಮಾನ್ ಸಹದಿ ಉದ್ಘಾಟಿಸಿದರು.

ಕೆ.ಸಿ.ಎಫ್ ನಾಯಕರಾದ ರಶೀದ್ ಸಖಾಫಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ನೂತನ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಲೀಮ್ ಕೆತ್ತೆಪುಲಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಸ್ ಸಫ್ವಾನ್, ಕೋಶಾಧಿಕಾರಿಯಾಗಿ ಖಲಂದರ್ ಶಾಫಿ ಮಿತ್ತಪಡ್ಪು, ಕ್ಯಾಂಪಸ್ ಕಾರ್ಯದರ್ಶಿಯಾಗಿ ನಾಫಿ ಟಿ, ಮೀಡಿಯಾ ಕಾರ್ಯದರ್ಶಿ ಯಾಗಿ ಅಜಾದ್, ದವಾ ಕಾರ್ಯದರ್ಶಿಯಾಗಿ ಅಬೂಬಕ್ಕರ್ ನವವಿ, ರೈಂಬೂ ಕಾರ್ಯದರ್ಶಿಯಾಗಿ ಆಶೀಖ್ ಪಿ, ಪಬ್ಲಿಕೇಶನ್ ಕಾರ್ಯದರ್ಶಿ ಯಾಗಿ ಸಲಾವುದ್ದೀನ್ ಕೆಎಸ್, ಕಲ್ಚರ್ ಕಾರ್ಯದರ್ಶಿಯಾಗಿ ಬಿಎಚ್ ನಿಝಾಮ್, ವಿಝ್ಡಾಮ್ ಕಾರ್ಯದರ್ಶಿ ಯಾಗಿ ನಿಶಾದ್ ಕೆ.ಪಿ, ಸೆಕ್ಟರ್ ಕೌನ್ಸಿರ್ ರಾಗಿ ನೌಶೀರ್, ಬಿಎಚ್ ನಿಝಾಮ್, ಸಲಾವುದ್ದೀನ್ ಕೆಎಸ್, ಸೈಯದ್ ಸಾಬಿತ್ ಸಖಾಫಿ ಅಲ್ ಮುಈನಿ,ಸಾಬಿತ್ ಕೆ.ಪಿ, ಕೆ.ಪಿ ಖಲಂದರ್ ಶಾಫಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುವಾಝ್ ಎಂ, ತಾಜುದ್ದೀನ್, ಶಾಕೀರ್ , ನವಾಝ್ ಕೆ., ಷರೀಫ್ ಕುದುಂಬ್ಲಾಡಿ, ಸ್ವಾಲಿಹ್, ಅಝಾಮ್,ಅಫ್ರೀದ್, ಅಕ್ಮಲ್, ಝಾಮ್ಮಿಲ್ ಟಿ. ಇವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ವೀಕ್ಷಕರಾಗಿ ಆಗಮಿಸಿದ ಮಾಣಿ ಸೆಕ್ಟರ್ ಕಾರ್ಯದರ್ಶಿಯಾದ ನೌಫಲ್ ಪೇರಮೊಗರ್, ಸೆಕ್ಟರ್ ಕೋಶಾಧಿಕಾರಿಯಾದ ಅನ್ಸಾರ್ ಸತ್ತಿಕಲ್ಲು, ಕೆಸಿಎಫ್ ನಾಯಕರಾದ ನಾಸೀರ್ ಬಿಎಚ್ ,SYS ಕೋಶಾಧಿಕಾರಿಯಾದ ಕಾಸಿಮ್ ಕೆ.ಪಿ, ಹಾಗೂ ತಾಜುಲ್ ಉಲಮಾ ಸುನ್ನಿ ಸೆಂಟರ್ ಅಧ್ಯಕ್ಷರಾದ ಕೆ.ಬಿ ಮುಹಮ್ಮದ್, SYS ನಾಯಕರಾದ ಕೆ.ಎಸ್ ಯೂಸುಫ್,ಟಿ ಷರೀಫ್, ರಫೀಕ್ ಮದನಿ, ಯವರು ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿದರು, ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಸಾಜಿದ್ ಎಂ SYS ಗೆ ಸದಸ್ಯರಾದರು.
ಕಾರ್ಯಕ್ರಮದಲ್ಲಿ SSF ಹಾಗೂ SYS ನ ಹಲವು ಕಾರ್ಯಕರ್ತರು ಹಾಗೂ ನಾಯಕರು ಉಪಸ್ಥಿತರಿದ್ದರು. ಕೆ.ಪಿ ಖಲಂದರ್ ಶಾಫಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಸಫ್ವಾನ್ ಕೆ.ಎಸ್ ಧನ್ಯವಾದಗೈದರು.
ವರದಿ: ಅಬ್ದುಲ್ ಖಾದರ್ ಪಾಟ್ರಕೋಡಿ