dtvkannada

'; } else { echo "Sorry! You are Blocked from seeing the Ads"; } ?>

ಕುಂಬ್ರ: ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒರ್ವ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಕುಂಬ್ರದಲ್ಲಿ ಇಂದು ರಾತ್ರಿ ನಡೆದಿದೆ.

ಕುಂಬ್ರ ಕಡೆಯಿಂದ ಶೇಖಮಲೆ ಕಡೆಗೆ ಚಲಿಸುತ್ತಿದ್ದ ಆಕ್ಟೀವಾ ಮತ್ತು ಕೌಡಿಚ್ಚಾರ್ ಕಡೆಯಿಂದ ಬಂದ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಆಕ್ಟೀವಾ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ. ತಲೆಗೆ‌ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ವಿಪರೀತ ರಕ್ತಸ್ರಾವವಾಗಿದೆ ಎಂದು ತಿಳಿದು ಬಂದಿದೆ .

'; } else { echo "Sorry! You are Blocked from seeing the Ads"; } ?>

ಅಪಘಾತವು ಪುತ್ತೂರು ಸುಳ್ಯ ಮುಖ್ಯರಸ್ತೆಯ, ಕುಂಬ್ರ ಸಮೀಪದ ಹಾಲಿನ ಡಿಪ್ಪೋ ಬಳಿ ನಡೆದಿದ್ದು ಗಾಯಗೊಂಡ ಆಕ್ಟೀವಾ ಸವಾರನನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಲಾಗಿದೆ.

ಬೈಕ್ ಸವಾರನಿಗೂ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತದ ತೀವ್ರತೆಗೆ ಎರಡು ದ್ವಿಚಕ್ರ ವಾಹನಗಳು ಸಂಪೂರ್ಣ ಜಖಂಗೊಂಡಿದ್ದು ಸಂಪ್ಯ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿನೆ ನಡೆಸುತ್ತಿದ್ದಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!