';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಂಗಳೂರು: ಕೇರಳದ ಗವರ್ನಮೆಂಟ್ ಚಿಲ್ಡ್ರನ್ ಹೋಮ್ನಿಂದ 6 ಅಪ್ರಾಪ್ತ ಬಾಲಕಿಯರ ನಾಪತ್ತೆಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕಿ ಇದೀಗ ಬೆಂಗಳೂರಲ್ಲಿ ಇಂದು ಪತ್ತೆಯಾಗಿದ್ದಾಳೆ.
ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ಬಾಲಕಿಯರಲ್ಲಿ ಒಬ್ಬರು ಪತ್ತೆಯಾಗಿದ್ದು, ಈಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.
ಗಣರಾಜ್ಯೋತ್ಸವ ಆಚರಣೆಯ ಬಳಿಕ 6 ಮಂದಿ ಬಾಲಕಿಯರು ಸಂಸ್ಥೆಯಿಂದ ನಾಪತ್ತೆಯಾಗಿದ್ದರು. ಘಟನೆ ಸಂಬಂಧ ಚೆವಯೂರು ಠಾಣೆಗೆ ಚಿಲ್ಡ್ರನ್ ಹೋಮ್ ಅಧೀಕ್ಷಕರು ದೂರು ನೀಡಿದ್ದರು.
ದೂರಿನನ್ವಯ ಕಾರ್ಯಪ್ರವೃತ್ತರಾಗಿದ್ದ ಕೇರಳ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಬಾಲಕಿಯೋರ್ವಳು ಪತ್ತೆಯಾಗಿರುತ್ತಾಳೆ. ಇನ್ನೂ ಐವರು ಬಾಲಕಿಯರ ಪತ್ತೆಗಾಗಿ ಪೊಲೀಸರು ಕಾರ್ಯ ಮುಂದುವರಿಸಿದ್ದಾರೆ.