dtvkannada

ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಏರೋಪ್ಲೇನ್‌ ಮೂಲಕ ಶುಭಾಶಯ ಕೋರಿ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು. ಕೆನರಾ ಬ್ಯಾಂಕ್‌ ನಗರದ ಜನರಿಗೆ ಗಣರಾಜ್ಯೋತ್ಸವದ ಶುಭಾಶಯಗಳನ್ನು ವಿಶೇಷವಾಗಿ ತಿಳಿಸುವ ಉದ್ದೇಶದಿಂದ ಕೈಗೊಂಡಂತಹ ಅಭಿಯಾನದ ಇದಾಗಿತ್ತು. ಇದನ್ನು ಬೆಂಗಳೂರಿನ ಆಕಾರ್‌ ಅಡ್ವರ್‌ ಟೈಸಿಂಗ್‌ ಮತ್ತು ಏರಿಯಲ್‌ ವರ್ಕ್ಸ್‌ ಏರೋ ಎಲ್‌ಎಲ್‌ಪಿ ಸಂಸ್ಥೆಗಳು ಇಂದು ಹ್ಯಾಪಿ ರಿಪಬ್ಲಿಕ್‌ ಡೇ ಎನ್ನುವ ಫಲಕವನ್ನ ನಗರದ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ಭಿತ್ತರಿಸಿದವು.

ಏರಿಯಲ್‌ ವರ್ಕ್ಸ್‌ ಏರೋ ಎಲ್‌ಎಲ್‌ಪಿ ಸಂಸ್ಥೆಯ ಕ್ಯಾಪ್ಟನ್‌ ಮುರಳಿ ಅವರು ಹಾರಿಸಿದ ವಿಮಾನದಲ್ಲಿ ಜಕ್ಕೂರಿನ ಏರೋಡ್ರೋಂ ನಿಂದ ಫಲಕವನ್ನ ನಗರದ ಜೆ.ಸಿ ರಸ್ತೆ, ಲಾಲ್‌ಬಾಗ್‌ ಹಾಗೂ ಬೆಂಗಳೂರು ದಕ್ಷಿಣ ಭಾಗದಲ್ಲಿ ಸುಮಾರು 2 ಗಂಟೆಗಳ ಕಾಲ ಹಾರಾಟ ನಡೆಸಿ ಗಣರಾಜ್ಯೋತ್ಸವದ ಸಂದೇಶವನ್ನು ಭಿತ್ತರಿಸಿದರು.

ನಂತರ ಕ್ಯಾಪ್ಟನ್‌ ಮುರಳಿ ಮಾತನಾಡಿ, ರಾಜ್ಯದಲ್ಲಿ ಮೊದಲ ಬಾರಿಗೆ ಇಂತಹ ಜಾಹಿರಾತು ಸೇವೆಯನ್ನ ಒದಗಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ನಮ್ಮ ಸಂಸ್ಥೆ ಏರಿಯಲ್‌ ವರ್ಕ್ಸ್‌ ಏರೋ ಎಲ್‌ಎಲ್‌ಪಿ, ಆಕಾರ್‌ ಅಡ್ವರ್‌ ಟೈಸಿಂಗ್‌ ಜೊತೆಯಾಗಿ ರಾಜ್ಯದ ಜನರಿಗೆ ಈ ವಿಶೇಷ ಸೇವೆಯನ್ನು ಪ್ರಾರಂಭಿಸಲಾಗಿದೆ. ಆಕಾಶದಲ್ಲಿ ಸುತ್ತುತ್ತಾ ಪ್ರೀತಿಯ ಸಂದೇಶಗಳನ್ನು ಪ್ರೀತಿಪಾತ್ರರಿಗೆ ತಲುಪಿಸುವ ಸೇವೆ ಇದಾಗಿದೆ. ಅಲ್ಲದೇ, ಸಂಸ್ಥೆಯ ಬಗ್ಗೆ, ಜನರಿಗೆ ಸಂದೇಶಗಳನ್ನು ಒದಗಿಸುವಂತಹ, ರಾಜಕೀಯ ವಿಷಯಗಳನ್ನು ಬಿತ್ತರಿಸುವಂತಹ ಜಾಹೀರಾತುಗಳನ್ನು ಈ ಸೇವೆಯ ಮೂಲಕ ಬಿತ್ತರಿಸಬಹುದಾಗಿದೆ ಎಂದು ಹೇಳಿದರು.

ದೇಶದ ಮೂರನೇ ದೊಡ್ಡ ಪಿಎಸ್‌ಯು ಬ್ಯಾಂಕ್‌ ಆಗಿರುವ ಕೆನರಾ ಬ್ಯಾಂಕ್‌ ಮೊದಲಿನಿಂದಲೂ ಹೊಸತನದ ಮಾಧ್ಯಮವನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಏರೋಪ್ಲೇನ್‌ ಮೂಲಕ ವಿಶೇಷವಾಗಿ ಶುಭಾಷಯ ತಿಳಿಸುವ ನೂತನ ವಿಧಾನವನ್ನು ಬಳಸಿಕೊಳ್ಳುವ ಮೂಲಕ ಮತ್ತೊಮ್ಮೆ ವಿಶೇಷ ಮೆರೆಯಿತು.

ವಿಮಾನದ ಮೂಲಕ ಆಕಾಶದಲ್ಲಿ ಜಾಹೀರಾತು ನೀಡುವುದು ಬಹಳ ಪರಿಣಾಮಕಾರಿ ಎನ್ನುವುದು ಸಂಶೋಧನೆಗಳಿಂದ ತಿಳಿದುಬಂದಿದೆ. ಜಾಹೀರಾತುಗಳನ್ನ ಏರೋಪ್ಲೇನ್‌ನಿಂದ ಬಿತ್ತರಿಸುವುದು ಅಲ್ಲದೆ ವೈಯಕ್ತಿಕವಾದ ಸಂದೇಶ ಒಳಗೊಂಡ ಬ್ಯಾನರ್‌ಗಳನ್ನು ಈ ಸೇವೆಯ ಮೂಲಕ ಪ್ರದರ್ಶಿಸಬಹುದಾಗಿದೆ. ನಮ್ಮ ದೇಶದ 73 ನೇ ಗಣರಾಜ್ಯೋತ್ಸವದ ಶುಭಾಷಯಗಳನ್ನು ತಿಳಿಸುವ ಅತ್ಯಂತ ಮಹತ್ವದ ದಿನದ ಅಭಿಯಾನಕ್ಕೆ ಏರಿಯಲ್‌ ಜಾಹೀರಾತು ಮಾಧ್ಯಮವನ್ನು ಕೆನರಾ ಬ್ಯಾಂಕ್‌ ಬಳಸಿಕೊಂಡಿದ್ದು ಬಹಳ ಸಂತಸದ ವಿಷಯವಾಗಿದೆ ಎಂದು ಆಕಾರ್‌ ಅಡ್ವರ್ಟೈಸಿಂಗ್‌ನ ಸಿಇಓ ಶರಣ್‌ ಮಖಿಜಾ ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!