ಸುಬ್ರಹ್ಮಣ್ಯ: ಮನೆಯಿಂದ ಹೊರಟಿದ್ದ ಯುವತಿಯೋರ್ವಳು ನಾಪತ್ತೆಯಾದ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಬ್ರಮಣ್ಯದ ಬಳ್ಪ ಗ್ರಾಮದ ಕಾಪಿನಕಾಡು ಮನೆ ಬೀದಿಗುಡ್ಡೆಯ ತನ್ನ ಮನೆಯಿಂದ ಹೊರಟಿದ್ದ ಯುವತಿ ಕಾಣೆಯಾಗಿದ್ದಾಳೆ.
ಬಳ್ಪ ಕಾಪಿನಕಾಡು ಶ್ವೇತಾ (18) ಎಂಬ ಯುವತಿ ಜ.27ರಂದು ಮಧ್ಯಾಹ್ನದಿಂದ ಜ.28ರ ಬೆಳಗ್ಗಿನ ಮಧ್ಯೆ ಮನೆಯಿಂದ ನಾಪತ್ತೆಯಾಗಿದ್ದು, ಈ ವರೆಗೆ ಪತ್ತೆಯಾಗಿರುವುದಿಲ್ಲ ಎಂದು ಸುಬ್ರಹ್ಮಣ್ಯ ಠಾಣೆಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಮಣ್ಯ ಪೊಲೀಸರು ತನಿಕೆ ನಡೆಸುತ್ತಿದ್ದಾರೆ.