dtvkannada

'; } else { echo "Sorry! You are Blocked from seeing the Ads"; } ?>

ಬೆಳ್ತಂಗಡಿ.ಜ;30: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಮ್ಯುನಿಟಿ ಡೆವಲಪ್ಮೆಂಟ್ ಬೆಳ್ತಂಗಡಿ ವತಿಯಿಂದ ಇಂದಬೆಟ್ಟು ಗ್ರಾಮದ ಪಿಚಲಾರು ಮತ್ತು ಕೊಯ್ಯುರಿನ ಬೊಳೋಲಿ ಎಂಬಲ್ಲಿ ನಿರ್ಮಿಸಿದ ಮನೆಯನ್ನು ಉದ್ಘಾಟಿಸಿ ಫಲಾನುಭವಿ ಎರಡು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಎ.ಕೆ ಅಶ್ರಫ್ ಬಡ ಕುಟುಂಬಕ್ಕೆ ಮನೆಯ ಕೀ ನೀಡುವ ಮೂಲಕ ಹಸ್ತಾಂತರಿಸಿದರು. ಬಳಿಕ ಮಾತನಾಡಿ ಕಾರ್ಯಕರ್ತರ ಸೇವೆಯನ್ನು ಹಾಗೂ ದಾನಿಗಳ ಸಹಾಯವನ್ನು ಸ್ಮರಿಸಿ ಶ್ಲಾಘಿಸಿದರು.

'; } else { echo "Sorry! You are Blocked from seeing the Ads"; } ?>

ಇಂದಬೆಟ್ಟುವಿನ ಪಿಚಲಾರಿನಲ್ಲಿ ಬಹು ಜನಾಬ್ ಅಸ್ಸಯ್ಯದ್ ಕೆ.ಪಿ.ಎಸ್. ಝೈನುಲ್ ಆಬಿದೀನ್ ಜಮಾಲುಲ್ಲೈಲಿ ತಂಙಳ್ ಕಾಜೂರು ಮತ್ತು ಕೊಯ್ಯುರಿನ ಬೊಳೋಲಿಯಲ್ಲಿ ಬಹು ಜನಾಬ್ ಅಶ್ರಫ್ ಸಅದಿ ದುವಾಃ ನೆರವೇರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೊ, ಪಿಚಲಾರು ಜುಮಾ ಮಸೀದಿ ಖತೀಬರಾದ ಸಿರಾಜುದ್ದೀನ್ ಸಖಾಫಿ, ಪಾಪ್ಯುಲರ್ ಫ್ರಂಟ್ ಬೆಳ್ತಂಗಡಿ ಜಿಲ್ಲಾಧ್ಯಕ್ಷ ಮುಸ್ತಫಾ ಜಿಕೆ, ಎಸ್ ಡಿ ಪಿ ಐ ದಕ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ನಿಸಾರ್ ಕುದ್ರಡ್ಕ, ಪಾಪ್ಯುಲರ್ ಫ್ರಂಟ್ ನಾವೂರು ಡಿವಿಷನ್ ಅಧ್ಯಕ್ಷ ರಶೀದ್ ಬೆಳ್ತಂಗಡಿ, ಕುಕ್ಕಳ ಗ್ರಾಮ ಪಂಚಾಯತ್ ಸದಸ್ಯ ಹನೀಫ್ ಪುಂಜಾಲಕಟ್ಟೆ, ಪಿಚಲಾರು ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್, ಪಿಚಲಾರು ಜುಮಾ ಮಸೀದಿ ಕಾರ್ಯದರ್ಶಿ ಉಸ್ಮಾನ್ ಪಿಚಲಾರ್, ಪಿಚಲಾರು ಜುಮಾ ಮಸೀದಿ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಪಿಚಲಾರು ಜುಮಾ ಮಸೀದಿ ಜೊತೆ ಕಾರ್ಯದರ್ಶಿ ವಝಿರ್ ಬಂಗಾಡಿ, ಎರುಕಡಪು ಜುಮಾ ಮಸೀದಿ ಅಧ್ಯಕ್ಷ ಹಾರೂನು ಬಜಿಲ ಉಪಸ್ಥಿತರಿದ್ದರು.

'; } else { echo "Sorry! You are Blocked from seeing the Ads"; } ?>

ಕಮ್ಯುನಿಟಿ ಡೆವಲಪ್ಮೆಂಟ್ ಬೆಳ್ತಂಗಡಿಯ ಯೋಜನೆಯಲ್ಲಿ ಈ ವರ್ಷ ಅಂತ್ಯಕ್ಕೆ 15 ಮನೆಗಳ ಗುರಿ – ನವಾಝ್ ಕುದ್ರಡ್ಕ

ದಾನಿಗಳ ಸಹಾಯದಿಂದ ಮತ್ತು ಕಾರ್ಯಕರ್ತರ ಪರಿಶ್ರಮದಿಂದ ಬೆಳ್ತಂಗಡಿ ತಾಲೂಕಿನ ಸುನ್ನತ್ ಕೆರೆಯಲ್ಲಿ ಎರಡು, ಮೇಲಂತಬೆಟ್ಟುವಿನಲ್ಲಿ ಒಂದು, ಬೊಲ್ಮಿನಾರ್ ನಲ್ಲಿ ಒಂದು ಸೇರಿ ಒಟ್ಟು ನಾಲ್ಕು ಮನೆಗಳನ್ನು ಹಸ್ತಾಂತರಿಸಲಾಗಿದೆ. ಇಂದು ಇಂದಬೆಟ್ಟು ಗ್ರಾಮದ ಪಿಚಲಾರಿನ 6ನೇ ಮನೆ ಮತ್ತು ಕೊಯ್ಯುರಿನ ಬೊಲೋಳಿಯ 7ನೇ ಮನೆ ಹಸ್ತಾಂತರ ನಡೆಸಲಾಯಿತು. ಕಕ್ಕಿಂಜೆ, ಕಾವಲ್ ಕಟ್ಟೆ, ಪಾಂಡವರಕಲ್ಲು, ಬಂಗೇರಕಟ್ಟೆ, ಸುನ್ನತ್ ಕೆರೆ ಯಲ್ಲಿ ತಲಾ ಒಂದು ಮತ್ತು ಕುದ್ರಡ್ಕದಲ್ಲಿ ಎರಡು ಸೇರಿದಂತೆ ಒಟ್ಟು 7 ಮನೆಯ ಕಾಮಗಾರಿ ಪ್ರಗತಿಯಲ್ಲಿದೆ. ಕಾಜೂರಿನಲ್ಲಿ ಎರಡು ಮನೆಯ ಕೆಲಸ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಜಿಲ್ಲಾಧ್ಯಕ್ಷ ಮುಸ್ತಫಾ ಜಿಕೆ ಹಾಗೂ ಕಮ್ಯುನಿಟಿ ಡೆವಲಪ್ಮೆಂಟ್ ಉಸ್ತುವಾರಿ ನವಾಝ್ ಕುದ್ರಡ್ಕ ಜಂಟಿ ಹೇಳಿಕೆ ನೀಡಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!