ತೆಲಂಗಾಣ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಫುಟ್ಪಾತ್ ಮೇಲೆ ಹರಿದು ಕಾರಣ ಫುಟ್ಪಾತ್ ನಲ್ಲಿದ್ದ ನಾಲ್ವರು ಮಹಿಳೆಯರಿಗೆ ಢಿಕ್ಕಿ ಹೊಡೆದು ದಾರುಣವಾಗಿ ಸಾವಿಗೀಡಾದ ಘಟನೆ ಮುಂಜಾನೆ 6.50 ರ ಸುಮಾರಿಗೆ ತೆಲಂಗಾಣದಲ್ಲಿ ನಡೆದಿದೆ.
ಕಾರಿನಲ್ಲಿ ಮೂವರು ಅಪ್ರಾಪ್ತರು ಇದ್ದು, ಅದರಲ್ಲಿ ಒಬ್ಬಾತ ಕಾರು ಡ್ರೈವ್ ಮಾಡುತ್ತಿದ್ದನೆಂದು ತಿಳಿದು ಬಂದಿದೆ.ನಿಯಂತ್ರಣ ತಪ್ಪಿದ ಕಾರು ಫುಟ್ಪಾತ್ ಮೇಲೆ ಹರಿದು ಅಲ್ಲಿ ಗುಡಿಸಲಿನಲ್ಲಿ ತಂಗಿದ್ದ ನಾಲ್ವರು ಮಹಿಳೆಯರಿಗೆ ಢಿಕ್ಕಿ ಹೊಡೆದದ್ದರಿಂದ ಅವರು ಸಾವನ್ನಪ್ಪಿದ್ದಾರೆ.
14 ವರ್ಷದ ಹುಡುಗಿ ಸೇರಿ ನಾಲ್ವರು ಮೃತಪಟ್ಟಿದ್ದು ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಘಟನೆ ಸಂಭವಿಸುತ್ತಿದ್ದಂತೆ ಕಾರಿನಲ್ಲಿದ್ದ ಬಾಲಕರು ಕಾರಿನಿಂದ ಓಡಿ ಹೋಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಅವರನ್ನು ಹಿಡಿದು ತಂದು ಮೂವರ ಅಪ್ರಾಪ್ತರ ವಿರುದ್ಧ ಐಪಿಸಿ ಸೆಕ್ಷನ್ 304ರಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕಾರಿನಲ್ಲಿದ್ದ ಅಪ್ರಾಪ್ತರು 9ನೇ ತರಗತಿ ಬಾಲಕರು ಎಂದು ಗುರುತಿಸಲಾಗಿದ್ದು ಕಾರು ಡ್ರೈವ್ ಮಾಡುತ್ತಿದ್ದ ಚಾಲಕನ ತಂದೆಯ ಮೇಲೆ ಕೂಡ ಕೇಸ್ ದಾಖಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆಂದು ತಿಳಿದು ಬಂದಿದೆ.