ತಿರುವನಂತಪುರಂ: ಮಲಯಾಳಂ ಸುದ್ದಿ ಚಾನೆಲ್ ಮೀಡಿಯಾಒನ್ ಟಿವಿ (Mediaone) ಪ್ರಸಾರವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು “ಭದ್ರತಾ ಕಾರಣಗಳನ್ನು ಉಲ್ಲೇಖಿಸಿ” ನಿರ್ಬಂಧ ಹೇರಿದೆ.
ಸೋಮವಾರ ಮಧ್ಯಾಹ್ನ ಚಾನೆಲ್ ಪ್ರಸಾರವನ್ನು ನಿಲ್ಲಿಸಿದೆ. ಮೀಡಿಯಾಒನ್ ಟಿವಿ ಸಂಪಾದಕ ಪ್ರಮೋದ್ ರಾಮನ್ ಅವರು, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಚಾನೆಲ್ ಮೇಲೆ ಪ್ರಸಾರ ನಿಷೇಧವನ್ನು ವಿಧಿಸಿದೆ. “ಸುರಕ್ಷತಾ ಕಾರಣಗಳಿಂದಾಗಿ ನಿಷೇಧ ಹೇರಲಾಗಿದೆ ಎಂದು ಸಚಿವಾಲಯ ಹೇಳಿದೆ.
ಈ ನಿಷೇಧದ ಬಗ್ಗೆ ಕೇಂದ್ರ ಸರ್ಕಾರವು ಮೀಡಿಯಾಒನ್ ಟಿವಿಗೆ ವಿವರಗಳನ್ನು ನೀಡಿಲ್ಲ. ನಿಷೇಧದ ವಿರುದ್ಧ ಕಾನೂನು ಕ್ರಮ ಆರಂಭಿಸಿದ್ದೇವೆ. ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಚಾನೆಲ್ ಪ್ರಸಾರ ಮುಂದುವರಿಯುತ್ತದೆ. ಕೊನೆಗೂ ನ್ಯಾಯ ಸಿಗುತ್ತದೆ ಎಂಬ ಭರವಸೆಯೊಂದಿಗೆ ಪ್ರಸಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ’’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://twitter.com/MediaOneTVLive/status/1488067179698286593?
ಇತ್ತೀಚಿನ ವರ್ಷಗಳಲ್ಲಿ ಇದು ಎರಡನೇ ಬಾರಿಗೆ ಮೀಡಿಯಾ ಒನ್ ಟಿವಿ ಪ್ರಸಾರದಿಂದ ನಿರ್ಬಂಧಿಸಲಾಗಿದೆ. ಮಾರ್ಚ್ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿನ ಗಲಭೆಗಳ ಕುರಿತು ವರದಿ ಮಾಡುವಾಗ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ (ನಿಯಂತ್ರಣ) ಕಾಯಿದೆ, 1998 ರ ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಕೇಂದ್ರವು 48 ಗಂಟೆಗಳ ಕಾಲ ಚಾನೆಲ್ ಮೇಲೆ ನಿಷೇಧ ಹೇರಿತ್ತು.