ಕಡಬ: ಬೈಕ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ, ಡಿಕ್ಕಿಯ ರಭಸಕ್ಕೆ ಸವಾರ ರಸ್ತೆೆಗೆಸೆಯಲ್ಪಟ್ಟಿದ್ದು, ಹಿಂದಿನಿಂದ ಬಂದ ಲಾರಿ ಆತನ ತಲೆಯ ಮೇಲೆ ಸಂಚರಿಸಿದ ಪರಿಣಾಮ ಸವಾರ ದಾರುಣ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ಜ.31ರಂದು ನಡೆದಿದೆ
ದುರ್ಘಟನೆಯಲ್ಲಿ ಸಹ ಸವಾರ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
![](http://dtvkannada.in/wp-content/uploads/2022/01/IMG-20220131-WA0062.jpg)
ಮೃತ ದುರ್ದೈವಿಯನ್ನು ಆಲಂಕಾರು ಗ್ರಾಮದ ಶರವೂರು ನಿವಾಸಿ ರಾಜೀವಿ ಎಂಬವರ ಪುತ್ರ ನಂದಿಪ್ (21) ಎಂದು ತಿಳಿದು ಬಂದಿದೆ.
ಇವರು ಬೆಂಗಳೂರಿನ ಜಿಗನಿಯಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗ ದಲ್ಲಿದ್ದು ಬೆಳಿಗ್ಗೆ ಕೆಲಸಕ್ಕೆಂದು ಹಳೆನೇರಂಕಿಯ ನಿವಾಸಿ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದರು ಎನ್ನಲಾಗಿದೆ.
![](http://dtvkannada.in/wp-content/uploads/2022/01/IMG-20220131-WA0063.jpg)
ಈ ಸಂದರ್ಭದಲ್ಲಿ ಅಟೋ ರಿಕ್ಷವೊಂದು ಹಠತ್ತಾಗಿ ಬಲಕ್ಕೆ ತಿರುಗಿದಾಗ ಅದಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದು ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಲಾರಿ ಯುವಕನ ತಲೆ ಮೇಲೆಯೇ ಸಂಚರಿಸಿದ ಪರಿಣಾಮ ನಂದಿಪ್ ಸ್ಥಳದಲ್ಲಿ ಯೇ ಮೃತಪಟ್ಟಿದ್ದಾರೆ.
ಸಹ ಸವಾರ ಹಳೆನೆರಂಕಿ ನಿವಾಸಿ ಯುವಕ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತ ನಂದಿಪ್ ಅವರು ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.