ಮುಡಿಪು: ರಕ್ತ ಮಾನವನ ದೇಹದ ಒಳಭಾಗದಲ್ಲಿ ಹರಿಯ ಬೇಕೇ ವಿನಃ ಯಾವ ಕಾರಣಕ್ಕೂ ದೇಹದ ಹೊರ ಭಾಗದಿಂದ ಹರಿಯದಿರಲಿ ಎಂದು ಮಂಗಳೂರು ದಕ್ಷಿಣ ಸಂಚಾರಿ ಪೋಲಿಸ್ ಠಾಣಾ ವ್ರತ್ತ ನೀರಿಕ್ಷಕರಾದ ಗುರುದತ್ ಕಾಮತ್ ಅಭಿಪ್ರಾಯ ಪಟ್ಟರು

ಅವರು ಇಂದು ಮುಡಿಪು (30.1.2022) ಸಂಬಾರತೋಟ ಶಾಲಾ ವಠಾರದಲ್ಲಿ ಆಟೋ ರಾಜಾಕನ್ಮಾರ್ ಹೆಲ್ಪ್ ಲೈನ್ ಗ್ರೂಪ್ ಇದರ ನಾಲ್ಕನೇ ವಾರ್ಷಿಕೋತ್ಸವದ ಪ್ರಯುಕ್ತ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಹಾಗೂ ವೆನ್ಲಾಕ್ ಆಸ್ಪತ್ರೆ ರಕ್ತನಿಧಿ ಮಂಗಳೂರು ಇದರ ಸಹಭಾಗಿತ್ವ ದಲ್ಲಿ ಸಂಘಟಿಸಿದ ಸಾರ್ವಜನಿಕ ಬ್ರಹತ್ ಸೌಹಾರ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತಾಡುತ್ತಿದ್ದರು..
ವೇದಿಕೆಯಲ್ಲಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಕೊನಾಜೆ ಆಡಳಿತ ಮೋಕ್ತೆಸರ ಪ್ರಸಾದ್ ರೈ ಕಲ್ಲಿಮಾರ್,ಕಾಸರಗೋಡು ಜಿಲ್ಲಾ AITUC ಕೇರಳ ರಾಜ್ಯ ಉಪಾಧ್ಯಕ್ಷ ರಾದ ಮುಸ್ತಫಾ ಎಂ,ಡಿ, ಕಡಂಬಾರ್, ಭೀಮಸೂರ್ಯ ಚಾರಿಟೇಬಲ್ ಇದರ ಅದ್ಯಕ್ಷರಾದ ಅಶೋಕ್ ಕೊಂಚಾಡಿ,ಮುಡಿಪು ಚರ್ಚ್ ಧರ್ಮ ಗುರುಗಳಾದ ಫಾದರ್ ರಿಚರ್ಡ್ ಡಿ ಸೋಜಾ, ಕೊನಾಜೆ ಪೊಲೀಸ್ ಠಾಣೆ ASI ಮೋಹನ್, ಬ್ಲಡ್ ಹೆಲ್ಪ್ ಕೇರ್ ಎಡ್ವೈಝರ್ ಸುಲೈಮಾನ್ ಶೇಖ್, ಬ್ಲಡ್ ಹೆಲ್ಪ್ ಕೇರ್ ಅದ್ಯಕ್ಷರಾದ ನಝೀರ್ ಹುಸೈನ್, ನೂರಾನಿಯಾ 1 ಜುಮ್ಮಾ ಮಸೀದಿ ಸಾಂಬಾರ್ ತೋಟ ಅದ್ಯಕ್ಷರಾದ ಹಾಜಿ.ಇಬ್ರಾಹಿಂ, ಶಾಲಾಭಿವ್ರದ್ದಿ ಸಮಿತಿ ಅದ್ಯಕ್ಷರಾದ ಅಬೂಬಕ್ಕರ್ ಕೊಡಕಲ್ಲು, ಮುಡಿಪು ಕರಾವಳಿ ಅಟೋ ಪಾರ್ಕ್ ಅದ್ಯಕ್ಷರಾದ ಪ್ರಸಾದ್ ತೆಕ್ಕುಂಜ, ಮುಡಿಪು ಮಾಜಿ ಆಟೋ ಚಾಲಕರಾದ ಅಹ್ಮದ್ ಕುಂಞ, ಉಪಸ್ಥಿತರಿದ್ದರು, ಕುರ್ನಾಡು ಗ್ರಾಮ ಪಂಚಾಯತ್ ಅದ್ಯಕ್ಷರಾದ ಗಣೇಶ್ ನಾಯಕ್ ಕುರ್ನಾಡು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು, ಅಸ್ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ ದುವಾ ನೇರವೇರಿಸಿದರು,
ಪದ್ಮಶ್ರೀ ಪ್ರಶಸ್ತಿ ವಿಜೇತ ಅಕ್ಷರ ಸಂತ ಹರೇಕಳ ಹಾಜಬ್ಬ,ಚಿರಾಯು ಕ್ಲಿನಿಕ್ ಮುಡಿಪು ವೈದ್ಯರಾದ ನರೇಂದ್ರ ,ಕೆ. ಮೊಂಟೆಪದವು ಮಾಜಿ ಕಿರಿಯ ಆರೋಗ್ಯ ಸಹಾಯಕಿ ಸಿಲ್ವಿ ಐರಿಸ್ ಬಂಗೇರ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಮುಡಿಪು ನವೋದಯದಿಂದ ಸಂಬಾರ ತೋಟದ ವರೆಗೆ ರಿಕ್ಷಾ ರ್ಯಾಲಿ ಯನ್ನು ಸಿದ್ದಿಕ್ ಕೊಡಕಲ್ ಉದ್ಘಾಟಿಸಿದರು.

ಸುಮಾರು ನಲ್ವತ್ತಕ್ಕಿಂತಲೂ ಅಧಿಕ ಬಾರಿ ರಕ್ತದಾನ ಮಾಡಿದ ಶರೀಫ್ ಹೂ ಹಾಕುವ ಕಲ್ಲು,ಸತ್ತಾರ್ ಗೂಡಿನಬಳಿ,ಹಾರಿಸ್ ಬೋಳಂತೂರು ಇವರನ್ನು ಪುರಸ್ಕಾರ ಮಾಡಲಾಯಿತು.
ಅಬ್ದುಲ್ ಜಲೀಲ್ ಕೆ. ಸ್ವಾಗತಿಸಿದರು, ಇಕ್ಬಾಲ್ ಕೈರಂಗಳ ವಂದಿಸಿದರು, ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.