ಮಂಗಳೂರು: ಕಾರು ಚಲಾಯಿಸುತ್ತಿದ್ದ ವೇಳೆ ಚಾಲಕನಿಗೆ ಹೃದಯಾಘಾತವಾಗಿ ನಿಂತಿದ್ದ ಟೆಂಪೋ ಟ್ರಾವೆಲರ್‌ಗೆ ಢಿಕ್ಕಿ ಹೊಡೆದು ಚಾಲಕನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮೃತಪಟ್ಟ ಘಟನೆ ನಗರದ ಮಂಗಳಾದೇವಿಯ ರಾಮಕೃಷ್ಣ ಆಶ್ರಮದ ಎದುರು ನಿನ್ನೆ ನಡೆದಿದೆ.
ಮೃತಪಟ್ಟ ಕಾರು ಚಾಲಕನನ್ನು ಪಾಂಡೇಶ್ವರ ನಿವಾಸಿ ಮುಹಮ್ಮದ್ ಶರೀಫ್ ಇಸ್ಮಾಯಿಲ್ (57) ಎಂದು ಗುರುತಿಸಲಾಗಿದೆ.
ಇಸ್ಮಾಯಿಲ್ ನಿನ್ನೆ ತನ್ನ ಟೂರಿಸ್ಟ್ ಕಾರನ್ನು ಮಧ್ಯಾಹ್ನ ಮಂಗಳಾದೇವಿ-ಮಂಕಿಸ್ಟಾಂಡ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಏಕಾಏಕಿ ಹೃದಯಘಾತವಾಗಿದೆ.
ಈ ಸಂದರ್ಭದಲ್ಲಿ ಕಾರಿನ ನಿಯಂತ್ರಣ ತಪ್ಪಿದ್ದು ಕಾರು ರಸ್ತೆ ಬದಿ ನಿಂತಿದ್ದ ಟೆಂಪೋ ಟ್ರಾವೆಲರ್‌ನ ಹಿಂಭಾಗದ ಎಡಬದಿಗೆ ಢಿಕ್ಕಿ ಹೊಡೆದಿದೆ.
ಟೆಂಪೋ ಟ್ರಾವೆಲರ್ ಮುಂದೆ ನಿಂತಿದ್ದ ಬೈಕ್ ಅಪ್ಪಚ್ಚಿಯಾಗಿದ್ದು
ಅಪಘಾತದ ರಭಸಕ್ಕೆ ಇಸ್ಮಾಯೀಲ್ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದಿದ್ದರು.
ಆದರೆ ಸಾಗಿಸುತ್ತಿದ್ದ ವೇಳೆ ದಾರಿ ಮಧ್ಯೆಯೇ ಇಸ್ಮಾಯಿಲ್ ಮೃತಪಟ್ಟಿರುವುದಾಗಿ ಪ್ರಕರಣ ದಾಖಲಿಸಿರುವ ಸಂಚಾರ ಪೂರ್ವ ಠಾಣೆಯ ಪೊಲೀಸರು ತಿಳಿಸಿದ್ದಾರೆ.