ASI ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಷ್ಟ್
ಕರ್ತವ್ಯಯದ ನಿಮಿತ್ತ ಪೊಲೀಸ್ ಠಾಣೆಗೆಂದು ಹೊರಟಿದ್ದ ಎ.ಎಸ್.ಐ ಶವವಾಗಿ ಪತ್ತೆ
ಹಾಸನ: ಕುಶಾಲನಗಗರದ ಎಎಸ್ ಐ ನಾಪತ್ತೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಹಾಸನದ ಕೊಣನೂರಿನ ಕೆರೆಯೊಂದರಲ್ಲಿ ಎಎಸ್ ಐ ಸುರೇಶ್‌ರವರ ಮೃತದೇಹ ಪತ್ತೆಯಾಗಿದೆ.
ಇವರು ಮೂಲತಃ ಹಾಸನ ಜಿಲ್ಲೆಯ ಕೊಣನೂರು ಸಿದ್ದಾಪುರ ಗೇಟ್ ನವರಾದರವರು ಕುಶಾಲನಗರದ ಸಂಚಾರಿ ಠಾಣೆಯಲ್ಲಿ ಎ ಎಸ್ ಐ ಆಗಿ ಕರ್ತವ್ಯದಲ್ಲಿದ್ದರು.
ಅವರು ಕರ್ತವ್ಯದ ನಿಮಿತ್ತ ಮನೆಯಿಂದ ಹೊರಟವರು ಪೊಲೀಸ್ ಠಾಣೆಗೆ ತೆರಳದೆ ನಾಪತ್ತೆಯಾಗಿದ್ದರು. ಇತ್ತ ಮನೆಗೆ ಬಾರದ ಹಿನ್ನಲೆಯಲ್ಲಿ ಎಲ್ಲೆಡೆ ಹುಡುಕಾಟ ನಡೆಸಿ ಅವರ ಪತ್ನಿ ಕುಶಾಲನಗರ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು.
ಇಲ್ಲಿನ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದು ಹುಡುಕಾಟವನ್ನು ನಡೆಸಿದ್ದರು.
ಆದರೆ ಇದೀಗ ಅವರ ಶವವು ಹಾಸನ ಜಿಲ್ಲೆಯ ಕೊಣನೂರಿನ ಕೆರೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸಂಶಯ ಮೂಡುವಂತೆ ಮಾಡಿದೆ.ಹೆಚ್ಚಿನ ಮಾಹಿತಿ ತನಿಖೆಯಿಂದಷ್ಟೆ ಹೊರಬರಬೇಕಾಗಿದೆ.