';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಚಿನ್ನದ ಮೇಲೆ ಹಣ ಹೂಡಿಕೆ ಮಾಡಿ ಲಾಭಾಂಶ ನೀಡುವುದಾಗಿ ಹಲವರಿಂದ ಲಕ್ಷಾಂತರ ರುಪಾಯಿ ಪಡೆದು, ನಂತರ ಸಂಪರ್ಕಕ್ಕೂ ಸಿಗದೆ ಪರಾರಿಯಾಗಿದ್ದ ಪುತ್ತೂರು ಎಸ್ಡಿಪಿಐ ಮಾಜಿ ನಗರ ಅಧ್ಯಕ್ಷ ಬಶೀರ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಪುತ್ತೂರು ಠಾಣೆಗೆ ಆದೇಶಿಸಿದೆ.
ಚಿನ್ನದ ಮೇಲೆ ಲಾಭಾಂಶ ನೀಡುವುದಾಗಿ ಭರವಸೆ ನೀಡಿ ನನ್ನಿಂದ ಹಣ ಪಡೆದು ವಂಚಿಸಿದ್ದಾರೆ ಎಂದು ಬನ್ನೂರು ನಿವಾಸಿ ಹನೀಫ್ ಎಂಬವರು ನ್ಯಾಯಲಯದಲ್ಲಿ ಖಾಸಾಗಿ ದೂರು ದಾಖಲಿಸಿದ್ದರು.
ಎಸ್ಡಿಪಿಐ ಪುತ್ತೂರು ನಗರ ಮಾಜಿ ಅಧ್ಯಕ್ಷರಾಗಿದ್ದ ಬಶೀರ್ ಪುತ್ತೂರು ಸೇರಿದಂತೆ ಹಲವು ಕಡೆಯ ಜನರಿಂದ ಲಕ್ಷಾಂತರ ರುಪಾಯಿ ಪಡೆದು ಪಂಗನಾಮ ಹಾಕಿ, ನಂತರ ಸಂಪರ್ಕಕ್ಕೂ ಸಿಗದೆ ಪರಾರಿಯಾಗಿದ್ದರು. ಈ ನಡುವೆ ಅವರನ್ನು ಪಕ್ಷದಿಂದಲೂ ಉಚ್ಚಾಟಿಸಲಾಗಿತ್ತು. ಇದೀಗ ಹನೀಫ್ ನೀಡಿದ ದೂರಿನನ್ವಯ ಅವರ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಲಯ ಆದೇಶಿಸಿದೆ.