dtvkannada

'; } else { echo "Sorry! You are Blocked from seeing the Ads"; } ?>

ಮನುಷ್ಯರ ಚಿಂತನೆ ಹೇಗೆಲ್ಲ ವಿಭಿನ್ನವಾಗಿರುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಭಾರತಾದ್ಯಂತ ವೈರಲ್ ಆಗಿರುವ ಕಚ್ಚಾ ಬಾದಮ್ ಹಾಡನ್ನು ನಿಷೇದಿಸುವಂತೆ ಮಂಗಳೂರಿನ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಕರಾವಳಿ ಮೂಲದ ಲೇಖಕರಾದ ಸಲಾಂ ಸಮ್ಮಿ ಎಂಬವರು ಈ ಪತ್ರ ಬರೆದಿದ್ದಾರೆ.

'; } else { echo "Sorry! You are Blocked from seeing the Ads"; } ?>

ಯುವ ಸಮೋಹವನ್ನು ಹುಚ್ಚಾರನ್ನಾಗಿಸುವ ಈ ಹಾಡಿನಿಂದ ತಲೆ ಜಿಟ್ಟು ಹಿಡಿದುಬಿಟ್ಟಿದೆ. ಈ ಹಾಡಿನಿಂದಾಗಿ ಸಾರ್ವಜನಿಕ ಸ್ಥಳಗಳಿಗೂ ತೆರಳದಂತ ಪರಿಸ್ಥಿತಿ ನಿರ್ಮಾಣವಾಗಿದೆ, ತಕ್ಷಣ ಈ‌ ಹಾಡನ್ನು ಕರ್ನಾಟಕದಲ್ಲಿ ನಿಷೇದಿಸುವಂತೆ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಅವರ ಪತ್ರದ ಯಥಾಪ್ರತಿ ಈ ಕೆಳಗಿನಂತಿದೆ

ಬಾದಮ್ ಹಾಡು ನಿಷೇಧಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಿ!

ಮಾನ್ಯ ಮುಖ್ಯಮಂತ್ರಿಗಳಾದ Basavaraj Bommai ಅವರಲ್ಲಿ ಮಾಡುವ ಕಳಕಳಿಯ ವಿನಂತಿ ಏನೆಂದರೆ, ದಯವಿಟ್ಟು ಈ ಬಾಂಗ್ಲಾದೇಶ ಮೂಲದ ಬದಾಮ್ ಹಾಡನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು. ಯಾಕೆಂದರೆ ಈ ಹಾಡಿನಿಂದಾಗಿ ಯುವ ಸಮೂಹವು ಪ್ರಾಯಶಃ ಹುಚ್ಚಿಗೆ ಒಳಗಾಗಿ ತಾವೇನು ಮಾಡ್ತಿದ್ದಾರೆ ಎಂಬ ಪರಿವೇ ಇಲ್ಲದಂತಾಗಿದೆ. ಫೇಸ್‌ಬುಕ್‌, ಇನ್ಸಗ್ರಾಮ್, ವಾಟ್ಸ್‌ಆ್ಯಪ್‌ ಸ್ಟೇಟಸ್ ಹಾಗೂ ಇನ್ನಿತರ ಎಲ್ಲಾ ತರದ ಸಾಮಾಜಿಕ ಮನೋರಂಜನಾ ಆ್ಯಪ್‌ಗಳನ್ನೂ ತೆರೆದರೂ ಬರೀ ಇದೇ ಹಾಡು ಬರುತ್ತಿವೆ. ಬಸ್‌ನಲ್ಲಿ ಪ್ರಯಾಣಿಸುವಾಗ, ಇಳಿದು ಬಸ್ ನಿಲ್ದಾಣದಲ್ಲಿ ನಿಂತಾಗ, ಸ್ವಲ್ಪ ಮುಂದಕ್ಕೆ ಹೋದಾಗ, ಮಾಲ್‌ಗಳಲ್ಲೂ, ಹೊಟೇಲುಗಳಲ್ಲೂ, ಸಾರ್ವಜನಿಕ ಸ್ಥಳಗಳಲ್ಲೂ ಇದೇ ಹಾಡು ಕೇಳಿ ಬರ್ತಿದೆ.‌‌ ಈಗಾಗಲೇ ಈ ಹಾಡಿನಿಂದಾಗಿ ತಲೆ ಚಿಟ್ಟು ಹಿಡಿದು ಬಿಟ್ಟಿದೆ. ಅದು ಯಾವ ಮನುಷ್ಯ ಯಾವ ಕೆಟ್ಟ ಘಳಿಗೆಯಲ್ಲಿ ಎದ್ದು ಬಾದಾಮಿ ಮಾರಲು ಹೊರಟ್ನೋ ಅವತ್ತಿಂದ ಆತನನ್ನು ಹಿಡಿದು ಹಾಡು ಹಾಡಿಸಿ ಇದೀಗ ಕೊರೊನಾ ತರ ಈ ಹಾಡು ವೈರಲಾಗ್ತಿದೆ. ಕೊರೊನಾಕ್ಕಿಂತಲೂ, ಬ್ಲೂ ವೇಲ್ ಮೊಬೈಲ್ ಗೇಮ್‌ಕ್ಕಿಂತಲೂ ಭಯನಕವಾದ ಈ ಹಾಡನ್ನು ಸರ್ಕಾರ ಆದಷ್ಟು ಬೇಗ ನಿಷೇಧಿಸಿ ಜನರನ್ನು ಎಂದಿನ ದಿನಗಳಿಗೆ ಮರಳುವಂತೆ ಮಾಡಲು ಸಹಕಾರ ನೀಡಬೇಕಾಗಿ ಮನವಿಯನ್ನು ಮಾಡುತ್ತಿದ್ದೇನೆ..

ಸಲಾಂ ಸಮ್ಮಿ

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!