dtvkannada

ಕಲ್ಲಿಕೋಟೆ: ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದ ಸರ್ಕಾರದ ಕೋಮು ದ್ರುವಿಕರಣದ ಷಡ್ಯಂತರವಾಗಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ. ಪಿ ಉಸ್ತಾದ್ ಸುದ್ದಿಗೋಷ್ಠಿಗೆ ಹೇಳಿದರು.

ಕರ್ನಾಟಕದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಿಜಾಬ್ ಧರಿಸಿದಕ್ಕೆ ಕ್ಲಾಸ್ ರೂಮ್ ನಿಂದ ಹೊರ ಹಾಕಿದ ಘಟನೆಗಳು ಖಂಡನೀಯವಾಗಿದ್ದು ಸರ್ಕಾರ ಮತ್ತು ಕಾಲೇಜು ಪ್ರಿನ್ಸಿಪಾಲ್ ಮತ್ತು ಆಡಳಿತ ಮಂಡಳಿ ಸಂವಿಧಾನ ವಿರೋಧಿ ನಡೆಯನ್ನು ಮುನ್ನಡೆಸುತ್ತಿದೆ ಎಂದು ಅವರು ಘಟನೆಯನ್ನು ತೀವ್ರವಾಗಿ ಖಂಡಿಸಿ ಮಾತನಾಡಿದರು.

ವಸ್ತ್ರ ಎಂಬುವುದು ಪ್ರತಿಯೊಬ್ಬರ ಮೂಲಭೂತ ಹಕ್ಕುಗಳಾಗಿದ್ದು ಅದನ್ನು ಕಸಿಯಲು ಇಲ್ಲಿನ ಯಾವುದೇ ದುಷ್ಟ ಶಕ್ತಿಗಳಿಗೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಮುಸ್ಲಿಮರನ್ನು ದೇಶದ ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಬಿಂಬಿಸಲು ಸರ್ಕಾರ ಹೊರಟಿದೆ ಇದನ್ನು ಒಪ್ಪಲು ನಮ್ಮಿಂದ ಸಾಧ್ಯವಿಲ್ಲ ಎಂದು ಎ. ಪಿ ಉಸ್ತಾದ್ ಹೇಳಿದರು.

By dtv

Leave a Reply

Your email address will not be published. Required fields are marked *

error: Content is protected !!